ಪಾಟೀಲ ಕಮ್ಯುನಿಕೇಶನ್ಸ್ಗೆ ಅನಮೋಲ್ ರತ್ನ ಪ್ರಶಸ್ತಿ
ಬ್ಯಾಡಗಿ: ಸ್ಥಳೀಯ ಪಾಟೀಲ್ ಕಮ್ಯುನಿಕೇಶನ್ಸ್ ಏರ್ಟೆಲ್ ಅನಮೋಲ್ ರತ್ನ ಗೋಲ್ಡ್ನ ಡಿಸ್ಟ್ರಿಬ್ಯೂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏರ್ಟೆಲ್ ನೆಟ್ವರ್ಕ್ನಲ್ಲಿ 16 ಲಕ್ಷ ಗ್ರಾಹಕರನ್ನು ತಲುಪಿರುವ ಪಾಟೀಲ ಕಮ್ಯುನಿಕೇಶನ್ಸ್ ಅತ್ಯುತ್ತಮ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ತಾಜ್ ಹೋಟೆಲ್ನಲ್ಲಿ ಜರುಗಿದ ಸಮಾರಂಭದಲ್ಲಿ ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಶ್ರೀನಾಥ್ ರಾವ್ ಪ್ರಶಸ್ತಿ ವಿತರಿಸಿ ಗೌರವಿಸಿದರು. ಪಾಲುದಾರ ದತ್ತಾತ್ರೇಯ ಸಾಳುಂಕೆ ಮಾತನಾಡಿ, ಏರ್ಟೆಲ್ ನೆಟ್ವರ್ಕ್ ಎಲ್ಲ ರೀತಿಯ ಸೇವೆಗಳನ್ನು ತಾಲೂಕಿನಲ್ಲಿ ವೇಗವಾಗಿ ಗ್ರಾಹಕರಿಗೆ ತಲುಪಿಸುವಲ್ಲಿ ಶ್ರಮವಹಿಸಿದ್ದೇವೆ. ಗ್ರಾಹಕರು ನೀಡಿದ ಸಹಕಾರದಿಂದ ಪಾಟೀಲ ಕಮ್ಯುನಿಕೇಶನ್ಸ್ ಎತ್ತರಕ್ಕೆ ಬೆಳೆಯಲು ಕಾರಣವಾಯಿತು. ಬಹುಶಃ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಕ್ಕೆ ಸಂತೋಷವೆನಿಸುತ್ತಿದೆ ಎಂದರು. ಸಾಜಿದ್, ಚಂದ್ರು ಪಾಟೀಲ, ರಾಘವೇಂದ್ರ ಧವಂಡೆ ಇದ್ದರು.