ಸುದ್ದಿ ಸಂಕ್ಷೇಪ
ತರಬೇತಿಗೆ ಆಹ್ವಾನ
ಹಾವೇರಿ: ಎಚ್‌ಎಎಲ್ ಸಂಸ್ಥೆ ಐಟಿಐ ಅಭ್ಯರ್ಥಿಗಳಿಂದ ಅಪ್ರೆಂಟೀಸ್ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಐಟಿಐ (ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಟರ್, ಮೆಕಾನಿಕ್ (ಮೋಟರ್ ವೆಹಿಕಲ್), ಶೀಟ್ ಮೆಟಲ್ ವರ್ಕರ್ ಮತ್ತು ಕಾರ್ಪೆಂಟರ್) ಉತ್ತೀರ್ಣರಾದ ಅಭ್ಯರ್ಥಿಗಳು ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಆಸಕ್ತರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಎ ಬ್ಲಾಕ್, ಜಿಲ್ಲಾಡಳಿತ ಭವನ, ದೇವಗಿರಿ, ಹಾವೇರಿ- ಇಲ್ಲಿಗೆ ಡಿ. 24ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (ದೂ. 08375-249291) ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
ಬಿಜೆಪಿ ಕಾರ್ಯದರ್ಶಿಯಾಗಿ ಸಂಕಪ್ಪ
ರಾಣಿಬೆನ್ನೂರು: ತಾಲೂಕು ಬಿಜೆಪಿ ಮುಖಂಡ ಸಂಕಪ್ಪ ಮಾರನಾಳ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ಸಾಧನೆ
ಶಿಗ್ಗಾಂವಿ: ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯರಾದ ಕಾವ್ಯಾ ಕುರುಬರ, ಕಾವ್ಯ ಉಪ್ಪಾರ, ಪ್ರೀತಿ ದೋಶಗೇರ, ಚನ್ನವ್ವ ಗಾಜಿ, ಜ್ಯೋತಿ ಕಣಜೇರ, ಹೃತಿಕಾ ಕಲಾಲ ದೇಶಭಕ್ತಿಗೀತೆ, ಸಮೂಹ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ಆರ್.ವಿ. ಪಾಟೀಲ, ಸಂಗೀತ ಶಿಕ್ಷಕಿ ಗೋದಾವರಿ ಕಟ್ಟಿ, ಸಿಬ್ಬಂದಿ ಅಭಿನಂದಿಸಿದ್ದಾರೆ.
ತಾಛಂತ್ರಿಕ ವೃತ್ತಿ ತರಬೇತಿ
ಹಾವೇರಿ: ವಾರ್ತಾ ಇಲಾಖೆ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ 40 ನಿರುದ್ಯೋಗಿ ಪದವೀಧರರಿಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ತಾಂತ್ರಿಕ ವೃತ್ತಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಛಾಯಾಗ್ರಹಣ, ಸಂಕಲನ, ಮಲ್ಟಿ ಮೀಡಿಯಾದಲ್ಲಿ ಒಂದು ತಿಂಗಳ ಸರ್ಟಿಫಿಕೇಟ್ ಕೋರ್ಸ್ ರೀತಿಯಲ್ಲಿ ತಾಂತ್ರಿಕ ವೃತ್ತಿ ತರಬೇತಿಯನ್ನು ಮೈಸೂರು ವಿವಿಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಲ್ಲಿ ನಡೆಸಲು ಉದ್ದೇಶಿಸಿದೆ. ತರಬೇತಿ ಅವಧಿ 30 ದಿನ. ಊಟ, ವಸತಿ ಉಚಿತ. ಅಭ್ಯರ್ಥಿಗಳು ಪದವೀಧರರಾಗಿದ್ದು, ಕಂಪ್ಯೂಟರ್ ಜ್ಞಾನವಿದ್ದರೆ ಆದ್ಯತೆ. ವಯೋವುತಿ 21ರಿಂದ 35 ವರ್ಷ. ಒಟ್ಟು 40 ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುವುದು. ಆಸಕ್ತರು ತಮ್ಮ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಜಾತಿ ಇತ್ಯಾದಿ ವಿವರವುಳ್ಳ ಮಾಹಿತಿಯನ್ನು ಬಿಳಿಹಾಳೆ ಮೇಲೆ ಬರೆದು ಅಥವಾ ಟೈಪ್ ಮಾಡಿಸಿ, ದೃಢೀಕೃತ ದಾಖಲೆಗಳೊಂದಿಗೆ ಡಿ. ಡಿ. 31ರೊಳಗೆ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ತಾಂತ್ರಿಕ ವೃತ್ತಿ ತರಬೇತಿಗಾಗಿ ಅರ್ಜಿ ಎಂದು ಲಕೋಟೆ ಮೇಲೆ ನಮೂದಿಸಿ ಸಲ್ಲಿಸಬೇಕು.
ಉರ್ದು ಶಾಲೆಗೆ ಆಯ್ಕೆ
ಬ್ಯಾಡಗಿ: ತಾಲೂಕಿನ ಕಾಗಿನೆಲ್ಲಿ ಪ್ಲಾಟ್‌ನಲ್ಲಿರುವ ಸರ್ಕಾರಿ ಕಿರಿಯ ಉರ್ದು ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ನೂತನ ಅಧ್ಯಕ್ಷರಾಗಿ ಮನ್ಸೂರ ರೋಣ ಹಾಗೂ ಉಪಾಧ್ಯಕ್ಷರಾಗಿ ರೇಷ್ಮಾಬಾನು ಹಾವೇರಿ ಆಯ್ಕೆಯಾಗಿದ್ದಾರೆ. ಶಾಲೆ ಆವರಣದಲ್ಲಿ ನಡೆದ ಪಾಲಕರ ಸಭೆಯಲ್ಲಿ ಸದಸ್ಯರಾಗಿ ಅಲ್ಲಾಭಕ್ಷ ಬಳ್ಳಾರಿ, ಫಾತೀಮಾ ಹಾವೇರಿ, ಸಾಹಿರಾ ಬುರ್ಲಿಕಟ್ಟಿ, ರೇಷ್ಮಾ ಬಾನು ಶೇಖ್, ಜುಬೇದಾ ಮಲ್ಲಾಡ, ಶಬೀರಾ ಮಲೆಬೆನ್ನೂರ, ಗುಲ್ಜಾರ ಅಹ್ಮದ ಮುಲ್ಲಾ, ಮೋಯಿನ್ ಮುಲ್ಲಾ, ಮಹ್ಮದ ಇಸಾಕ್ ತಿಳವಳ್ಳಿ, ಮುಕ್ತಿಯಾರ್ ಚೋಪದಾರ, ರಿಯಾಜಹ್ಮದ್ ಕರೂಡಿ ಆಯ್ಕೆಯಾಗಿದ್ದಾರೆ.