ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 21 Dec 2013, 11:21 am

ಅಂಚೆ ಇಲಾಖೆ ಉದ್ಯೋಗ
ಹಾವೇರಿ: ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ (ಕರ್ನಾಟಕ ವೃತ್ತ) ಅವರು ಪೋಸ್ಟ್‌ಮನ್ ಮತ್ತು ಮೇಲ್ ಗಾರ್ಡ್ಸ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಅಧಿಸೂಚನೆ ಹೊರಡಿಸಿದ್ದಾರೆ. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದ ಹಾಗೂ ಜ. 3ಕ್ಕೆ 18ರಿಂದ 27 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು ಎಂದು ಹಾವೇರಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನಿಂದ ಕಲಿಕೋತ್ಸವ
ಹಾವೇರಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಕೋತ್ಸವ ಕಾರ್ಯಕ್ರಮವನ್ನು ಎಲ್ಲ ಶೈಕ್ಷಣಿಕ ಕ್ಲಸ್ಟರ್ ಹಂತಗಳಲ್ಲಿ ಡಿ. 21ರಿಂದ ಆಚರಿಸಲಾಗುತ್ತಿದೆ. ಶಾಲೆ ಸಮುದಾಯದ ಆಸ್ತಿ, ತಮ್ಮ ಮಕ್ಕಳು ಕಲಿಯಲಿ, ಕಲಿತು ವಿವೇಕಿಗಳಾಗಲಿ ಎಂದು ಸಮುದಾಯ ಮಕ್ಕಳನ್ನು ಶಾಲೆಗೆ ಕಳುಹಿಸುತ್ತದೆ. ಸಮುದಾಯದ ಈ ನಿರೀಕ್ಷೆಗಳು ಎಷ್ಟರ ಮಟ್ಟಿಗೆ ಶಾಲೆಗಳಲ್ಲಿ ಸಾಧನೆಯಾಗುತ್ತವೆ ಎಂದು ತಿಳಿಸುವುದು ಶಾಲೆಯ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ 1ರಿಂದ 5ನೇ ತರಗತಿ ಮಕ್ಕಳಿಗಾಗಿ 12 ಸ್ಪರ್ಧೆ, 6ರಿಂದ 8ನೇ ತರಗತಿ ಮಕ್ಕಳಿಗಾಗಿ 18 ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಪಾಲಕರು, ಸಮುದಾಯದ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು ಭಾಗವಹಿಸಿ, ಕಲಿಕೋತ್ಸವ ಯಶಸ್ವಿಗೊಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಕೋರಿದ್ದಾರೆ.
ಕವಳಿಕುಪ್ಪ ಶಾಲೆ ಸಾಧನೆ
ಹಿರೇಕೆರೂರು: ತಾಲೂಕಿನ ಚಿಕ್ಕೇರೂರು ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಜರುಗಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕವಳಿಕುಪ್ಪ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸತತ 3ನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 1ರಿಂದ 4ನೇ ತರಗತಿಯ ಚಿತ್ರಕಲೆಯಲ್ಲಿ ಲತಾ ಗೌಡರ, ಕ್ಲೇ ಮಾಡಲಿಂಗ್ ಮಲ್ಲಮ್ಮ ಮಾಜಿಗೌಡ್ರ, 5ರಿಂದ 7ನೇ ತರಗತಿಯ ಚಿತ್ರಕಲೆಯಲ್ಲಿ ಮಲ್ಲಮ್ಮ ಹಿರೇಮಠ, ಕ್ಲೇ ಮಾಡಲಿಂಗ್‌ನಲ್ಲಿ ಅನು ಹಿರೇಮಠ ಪ್ರಥಮ ಸ್ಥಾನ ಗಳಿಸಿದ್ದಾರೆ.  ವಿಜೇತರು ಹಾಗೂ ಮಾರ್ಗದರ್ಶಿ ಶಿಕ್ಷಕ ಚಂದ್ರಶೇಖರ ಅಂಗಡಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಅನಂದ, ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಪಿ.ಬಿ. ನಿಂಗನಗೌಡ್ರ, ಶಿಕ್ಷಣ ಸಂಯೋಜಕ  ಎ.ಡಿ. ಕುರುಬರ, ವಿ.ಎಸ್. ಕೋರಿ, ಸಿಆರ್‌ಪಿ ಎಚ್.ಎಸ್. ಮಾಜಿಗೌಡ್ರ, ಮುಖ್ಯ ಶಿಕ್ಷಕ ಎಂ.ಬಿ. ಗುಡಿಹಿಂದ್ಲರ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.
23ಕ್ಕೆ ದಸಂಸ ಸಮಾವೇಶ
ಹಾವೇರಿ: ಡಿ. 23ರಂದು ಕೋಲಾರದಲ್ಲಿ ನಡೆಯುವ ಬಾಬಾಸಾಹೇಬ ಅಂಬೇಡ್ಕರ್ ಪರಿನಿರ್ವಾಣ ದಿನದ ಸಮಾವೇಶಕ್ಕೆ ಜಿಲ್ಲೆಯ ಎಲ್ಲ 7 ತಾಲೂಕುಗಳಿಂದ ಒಟ್ಟು 2 ಸಾವಿರ ಜನರು ತೆರಳಲಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ ತಿಳಿಸಿದ್ದಾರೆ. ಪರಿನಿರ್ವಾಣ ದಿನ ದಲಿತರ ಸ್ವತಂತ್ರ ರಾಜ್ಯಾಧಿಕಾರದೆಡೆಗೆ ಮಂಥನ ದಿನ ಸಮಾವೇಶ ನಡೆಯಲಿದೆ ಎಂದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement