ಕಣವಿಸಿದ್ದಗೇರಿ: ಕ್ಲಸ್ಟರ್ ಮಟ್ಟದ ಕಲಿಕೋತ್ಸವ
ಹಿರೇಕೆರೂರು: ಕಣವಿಸಿದ್ದಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಶನಿವಾರ ನಡೆಯಿತು.
ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಿದ್ದಪ್ಪ ಕಚ್ಚರಬಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಾಂತಮ್ಮ ಹಾದಿಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಬೇರಪ್ಪ ಕರಿಯಣ್ಣನವರ, ಸದಸ್ಯರಾದ ರಾಮನಗೌಡ ಪಾಟೀಲ್, ಸಾಕ್ಷರತಾ ಪ್ರೇರಕರಾದ ಹಾಲಪ್ಪ ಬಳಗಾವಿ, ಕಡೂರು ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಸ್. ಮಲ್ಲೂರ, ಸ್ಥಳೀಯ ಮುಖ್ಯ ಗುರುಗಳಾದ ವಿ. ಎಚ್. ನಾಡರ್ ಹಾಗೂ ಊರ ಪ್ರಮುಖರು, ಕ್ಲಸ್ಟರ್‌ನ ಎಲ್ಲ 10 ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬುಳ್ಳಾಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ ಹಾಗೂ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಯಾಗಿದ್ದ ಸುರೇಶ ಅಂದಾನಪ್ಪನವರ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಕಾವ್ಯಾ ಕಬ್ಬಾರ, ರೇಣುಕಾ ಎಚ್.ಬಿ. ನಿರೂಪಿಸಿದರು. ಮುಖ್ಯ ಗುರುಗಳಾದ ವಿ.ಎಚ್. ನಾಡರ್ ಸ್ವಾಗತಿಸಿದರು. ಶಿಕ್ಷಕರಾದ ಎಸ್.ಆರ್. ಉಮೇಶ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಸ್. ಪೂಜಾರ ವಂದಿಸಿದರು.
ವಿದ್ಯಾರ್ಥಿಗಳ ತರಗತಿ ಕೋಣೆಯಲ್ಲಿ ನಡೆಯುವ ಸ್ಪಷ್ಟ ಓದು, ಪತ್ರಲೇಖನ, ಕಂಠಪಾಠ, ಬಾಯ್ದೆರೆ ಲೆಕ್ಕಗಳು ಸೇರಿದಂತೆ ರಾಸಾಯನಿಕ ವಸ್ತುಗಳ ಹೆಸರು ಹೇಳುವಿಕೆ, ಶಬ್ದಕೋಶದಲ್ಲಿ ಅರ್ಥ ಹುಡುಕುವುದು. ಇಂಗ್ಲಿಷ್ ಸಂಭಾಷಣೆ, ನಾಟಕ ಮುಂತಾದ 30 ಸ್ಪರ್ಧೆಗಳು ನಡೆದವು.