ಬಲಿಷ್ಠ ರಾಷ್ಟ್ರಕ್ಕಾಗಿ ಮೋದಿ ಗೆಲ್ಲಿಸಿ: ಸಂಗಣ್ಣ
ಹನುಮಸಾಗರ: ರಾಷ್ಟ್ರವನ್ನು ಬಲಿಷ್ಠಗೊಳಿಸಲು ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ಹೇಳಿದರು.
ಇಲ್ಲಿಯ ಶ್ರೀಅಂಭಾಭವಾನಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲೂಕಾ ಯುವಮೋರ್ಚಾ ಕಾರ್ಯಕಾರಣಿ ಸಭೆ ಕಾರ್ಯಕ್ರಮ ಉದ್ಘಾಟಿಸಿ ಬುಧುವಾರ ಮಾತನಾಡಿದರು.
ಯುಪಿಎ ಸರ್ಕಾರದಿಂದ ಈಗಾಗಲೆ ಭಾರತ ಸಾಕಷ್ಟು ವೈಫಲ್ಯತೆ ಕಂಡಿದೆ. ಈಗ ಭಾರತಕ್ಕೆ ಸಮರ್ಥ ನಾಯಕನ ಅತ್ಯವಶ್ಯವಾಗಿದ್ದು, ಯುವಶಕ್ತಿಯೊಂದಿಗೆ ಬಲಿಷ್ಠ ಭಾರತ ರಾಷ್ಟ್ರ ನಿರ್ಮಾಣ ಮಾಡುವ ಏಕೈಕ ವ್ಯಕ್ತಿಯೆಂದರೆ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾದ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂದರು.
ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾವ್ ಕುಲಕರ್ಣಿ, ತಾಲೂಕಾಧ್ಯಕ್ಷ ಶಶಿಧರ ಕವಲಿ, ಮುಖಂಡ ಮೈನುದ್ದೀನಸಾಬ್ ಮಾತನಾಡಿದರು.
ತಾಲೂಕು ಯುವಮೋರ್ಚಾ ಅಧ್ಯಕ್ಷ ಜಯತೀರ್ಥ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಹುಲ್ಲೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬಾಕಳೆ, ಅಲ್ಪಸಂಖ್ಯಾತರ ಬಿಜೆಪಿ ಘಟಕದ ತಾಲೂಕಾಧ್ಯಕ್ಷ ಮಹಿಬೂಬಸಾಬ ಮೂಲಿಮನಿ, ಬಿಜೆಪಿ ಮುಖಂಡರದಾ ಸಕ್ರಪ್ಪ ಬಿಂಗಿ, ಬಸವರಾಜ ಹಳ್ಳೂರ, ಡಾ. ಶರಣು ಹವಲ್ದಾರ್, ವೀರನಗೌಡ ಪಾಟೀಲ, ಚಂದ್ರಹಾಸ ಮಲಜಿ, ಗೌಸಮೊಹಿನುದ್ದೀನಸಾಬ ವಂಟೆಳ್ಳಿ, ಕುಷ್ಟಗಿ ನಗರ ಘಟಕದ ಅಧ್ಯಕ್ಷ ರಾಜು ಪತ್ತಾರ, ಚಂದ್ರ ವಡಗೇರಿ ಇತರರಿದ್ದರು.