ಗುತ್ತಲ: ಗಡ್ಡಿ ಕರಿಯಮ್ಮ ದೇಗುಲಕ್ಕೆ ಗುದ್ದಲಿ ಪೂಜೆ
ಹಾವೇರಿ: ತಾಲೂಕಿನ ಗುತ್ತಲ ಕುರಿ ಸಂವರ್ಧನಾ ಕೇಂದ್ರದ ಬಳಿ ನೂತನವಾಗಿ ಗಡ್ಡಿ ಕರಿಯಮ್ಮನ ದೇವಸ್ಥಾನ ನಿರ್ಮಾಣಕ್ಕೆ ಹಾವೇರಿ ಬಯೋ ಎನರ್ಜಿ ಘಟಕದ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಪರಿಸರ ಸ್ನೇಹಿಯಾದ ಈ ವಿದ್ಯುತ್ ಉತ್ಪಾದನಾ ಕೇಂದ್ರದ ಬಳಿ ಈ ಭಾಗದ ಜನರ ಆರಾಧ್ಯ ದೈವ ಗಡ್ಡಿ ಕರಿಯಮ್ಮನ ಭವ್ಯವಾದ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದು ಗೋಪಿನಾಥ್ ಹೇಳಿದರು.
ಅನೇಕ ಗ್ರಾಮಗಳ ರೈತ ಮುಖಂಡರು ಹಾಗೂ ರೈತರು ಗೋಪಿನಾಥ್, ಇತರ ಅಧಿಕಾರಿಗಳನ್ನು ಸನ್ಮಾನಿಸಿದರು. ಕೂರಗುಂದ ಗ್ರಾಪಂ ಅಧ್ಯಕ್ಷ ಭರಪ್ಪ ಹೊಟ್ಟೆಪ್ಪನವರ, ಗುತ್ತಲ ಗ್ರಾಪಂ ಉಪಾಧ್ಯಕ್ಷ ಪಿ.ಎನ್. ಹೇಮಗಿರಿಮಠ, ರಾಜೀವನಗರದ ಮುಖಂಡ ಹನುಮಂತಪ್ಪ ಲಮಾಣಿ, ರೈತ ಸಂಘದ ಅಧ್ಯಕ್ಷ ರಾಜು ಇಟಗಿ, ರೈತ ಮುಖಂಡರಾದ ಹನುಮಂತಪ್ಪ ಮರಡಿ, ಗುಡ್ಡಪ್ಪ ಗಿರಿಯಪ್ಪನವರ, ಶಿವಣ್ಣ ಹೊಟ್ಟೆಪ್ಪನವರ, ಬಸವಣ್ಣೆಪ್ಪ ಕಾಟೇನಹಳ್ಳಿ, ಪುಟ್ಟೆನಾಯಕ ಲಮಾಣಿ, ಕೃಷ್ಣಾನಾಯಕ ಲಮಾಣಿ ಇದ್ದರು.