ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ದಾಳಿಂಬೆ ರೈತರ ಸಾಲದ ಬಡ್ಡಿ ಶೀಘ್ರ ಮನ್ನಾ: ಸಿದ್ದರಾಮಯ್ಯ

Vishwanath S
Updated On : 25 Dec 2013, 12:50 pm

ಕುಷ್ಟಗಿ: ರಾಜ್ಯದ 13 ಜಿಲ್ಲೆಗಳ ದಾಳಿಂಬೆ ಬೆಳೆಗಾರರ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು ಎಂದು 13 ಜಿಲ್ಲೆಗಳ ದಾಳಿಂಬೆ ಬೆಳೆ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದ ದಾಳಿಂಬೆ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಕುರಿತು ಚರ್ಚಿಸಲಾಗುವುದು. ಆದರೆ, ಬಡ್ಡಿ ಮನ್ನಾ ಕುರಿತು 2-3 ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲದೆ ದಾಳಿಂಬೆ ಬೆಳೆಗಾರರಿಗೆ ಮರು ಸಾಲ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಜ್ಯ ರಾಜೀವಗಾಂಧಿ ಸಾವಯವ ಕೃಷಿ ದಾಳಿಂಬೆ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ಹೇಳಿದರು.
ಸಿಎಂ ಸ್ಪಂದನೆ: ಹಲವು ವರ್ಷಗಳಿಂದ ಸಾಲದಿಂದ ಬಳಲುತ್ತಿರುವ ದಾಳಿಂಬೆ ಬೆಳೆಗಾರರ ಬಗ್ಗೆ ಕಳೆದ ಬಿಜೆಪಿ ಸರ್ಕಾರದಿಂದ ಸ್ಪಂದನೆ ಸಿಗಲಿಲ್ಲ. ಆದರೆ, ಸದ್ಯ ಇರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಕೃಷಿ ಸಚಿವ ಶರದ್ ಪವಾರ್, ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲದೆ ರಾಜ್ಯದ ದಾಳಿಂಬೆ ಬೆಳೆಗಾರರ ರು. 206 ಕೋಟಿ ಬಡ್ಡಿ ಮನ್ನಾವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಸಿಎಂ ಭೇಟಿ ಸಂದರ್ಭದಲ್ಲಿ ರೈತ ಮುಖಂಡರಾದ ವಿಠ್ಠಲ ರಾಠೋಡ, ಸೋಮು ರಾಠೋಡ, ಬಸುವರಾಜ ಪಾವಗಡ, ರಾಮದಾಸ, ದೊಡ್ಡಯ್ಯ ಗದ್ದಡಕಿ, ವೀರನಗೌಡ ಬಳೂಟಗಿ, ದೇವಪ್ಪ ಗಂಗನಾಳ, ಅಶೋಕ ಬಳೂಟಗಿ, ಮಾನಪ್ಪ ಬಡಿಗೇರ, ಪ್ರಭು ಪಾಟೀಲ, ನಾಗಪ್ಪ ಉಪ್ಪಾರ, ನಿಯೋಗದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement