ಶಿಕ್ಷಣದಿಂದ ಸಂಸ್ಕಾರ: ಕರಿಲಿಂಗಪ್ಪನವರ
ಬ್ಯಾಡಗಿ: ಶಿಕ್ಷಣದಿಂದ ಮಾತ್ರ ಮಕ್ಕಳಲ್ಲಿ ಸಂಸ್ಕಾರ ಬೆಳೆಯಬಲ್ಲದು. ಇತ್ತೀಚೆಗೆ ಮಕ್ಕಳಲ್ಲಿ ಬರೆಯುವ, ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಮಾನವೀಯ ಮೌನ್ಯಗಳೂ ಮಾಯವಾಗುತ್ತಿವೆ ಎಂದು ತಾಪಂ ಸದಸ್ಯ ಮಲ್ಲಿಕಾರ್ಜುನಪ್ಪ ಕರಲಿಂಗಪ್ಪನವರ ವಿಷಾದಿಸಿದರು.
ಕದರಮುಂಡಲಗಿ ಸರ್ಕಾರಿ ಹಿಪ್ರಾ ಹೆಣ್ಣುಮಕ್ಕಳ ಶಾಲೆಯಲ್ಲಿ ಬಿಸಲಳ್ಳಿ ವಿಭಾಗದ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಉದ್ಘಾಟಿಸಿ, ಗ್ರಂಥಾಲಯ ಸದ್ಬಳಕೆ ಮಾಡಿಕೊಂಡು ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಮಾಲತೇಶ ಅರಳೀಮಟ್ಟಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ರಾಮಪ್ಪ ನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕಮಲಮ್ಮ ಹಮ್ಮಿಗಿ, ಎಪಿಎಂಸಿ ಸದಸ್ಯ ರವೀಂದ್ರ ಪಟ್ಟಣಶೆಟ್ಟಿ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಬಡಗಣ್ಣನವರ, ಹನುಮಂತಪ್ಪ ಕುರುಡಮ್ಮನವರ, ಬಸವಂತಪ್ಪ ಕುಡುಪಲಿ, ಬಸವರಾಜ ಕಾರಿಗೇರ, ಎಸ್ಡಿಎಂಸಿ ಉಪಾಧ್ಯಕ್ಷೆ ಅಕ್ಕಮ್ಮ ಅರ್ಕಾಚಾರಿ, ಪ್ರಕಾಶ ಅಜ್ಜಮ್ಮನವರ, ಹಾಲನಗೌಡ್ರ ದಾನಪ್ಪಗೌಡ್ರ, ವೀರಣ್ಣ ವೆಂಕಣ್ಣನವರ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ. ಪಾಟೀಲ, ಎಚ್.ಡಿ. ಪುರದ. ಎಸ್.ಎಸ್. ತೇರದಾಳ, ಎಚ್.ಎಂ. ಖಾನ್, ಡಿ.ಎನ್. ಅಲ್ಲಾಪುರ, ವಿಷಯ ಪರಿವೀಕ್ಷಕ ಬಸವರಾಜಪ್ಪ ಇದ್ದರು.
ವಿ.ವಿ. ಮಾತನವರ ಮಾತನಾಡಿದರು. ಮುಖ್ಯ ಶಿಕ್ಷಕ ಬಿ.ಎಂ. ಜಗಾಪುರ ಸ್ವಾಗತಿಸಿದರು. ಪಿ.ಡಿ. ಪುಟ್ಟಪ್ಪ ವಂದಿಸಿದರು.