ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಿದ್ಧಾಂತ ಶಿಖಾಮಣಿ ಮಾರ್ಗದರ್ಶಿ ಗ್ರಂಥ

Vishwanath S
Updated On : 25 Dec 2013, 12:48 pm

ಶಿಗ್ಗಾಂವಿ: ಸಿದ್ಧಾಂತ ಶಿಖಾಮಣಿ ಸಕಲ ಜೀವಿಗಳಿಗೆ ಆದರ್ಶ ಮಾರ್ಗದರ್ಶ ನೀಡುವ ಗ್ರಂಥ. ಅದನ್ನು ಅಧ್ಯಯನ ಮಾಡಿ ಯಶಸ್ಸು ಪಡೆಯಬಹುದು ಎಂದು ಕನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಹೇಳಿದರು.
ಬಂಕಾಪುರ ಪಟ್ಟಣದ ಹುಚ್ಚೇಶ್ವರ ಮಠದಲ್ಲಿ ನಡೆದ 9ನೇ ವರ್ಷದ ಇಷ್ಟಲಿಂಗ  ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಮತ್ತು ಭಗವದ್ಗೀತೆ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಶಿ ಪೀಠ ಜಗದ್ಗುರು ಡಾ೤ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮಹಾತ್ಮರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಶಿವನಿಗೆ ಶರಣಾಗಿ, ಬದುಕಿನ ಸಂಕಷ್ಟಗಳನ್ನು ದೂರ ಮಾಡಿಕೊಳ್ಳುವಂತೆ ಕರೆ ನೀಡಿದರು.
ಕೂಡಲ ಗುರುನಂಜೇಶ್ವರ ಮಠದ ಮಹೇಶ್ವರ ದೇವರು ಮಾತನಾಡಿ, ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಕರೆದು, ಅವುಗಳ ತಡೆಗೆ ಕಾಯ್ದೆ ರೂಪಿಸುವುದು ಸರಿಯಲ್ಲ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ. ಮನುಷ್ಯನ ಶ್ರೇಯಸ್ಸಿಗಾಗಿ, ಉತ್ತಮ ಮಾರ್ಗದಲ್ಲಿ ನಡೆಯಲು ಸಂಸ್ಕಾರ, ಸಂಪ್ರದಾಯಗಳು ಅವಶ್ಯವಾಗಿವೆ ಎಂದರು.
ಹುಬ್ಬಳ್ಳಿ ಪಂಚಗ್ರಹ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಬ್ಯಾಡಗಿ ಗಂಗಾಧರ ಶಾಸ್ತ್ರಿಗಳು, ರೇವಣಸಿದ್ದಯ್ಯ ಹಿರೇಮಠ ಮಾತನಾಡಿದರು. ಪರಶುರಾಮ ನರೆಗಲ್ಲ ಸಂಗೀತ ಸೇವೆ ನೀಡಿದರು. ಚಂದ್ರಶೇಖರ ಕೋರಿ ಸ್ವಾಗತಿಸಿದರು. ಸಿ.ಎನ್. ಶಿಗ್ಗಾಂವಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement