ಅಟಲ್ ಜನ್ಮದಿನ: ಹಣ್ಣು ವಿತರಣೆ
ಹಾನಗಲ್ಲ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಬಿಜೆಪಿ ಯುವ ಮೋರ್ಚಾ ಘಟಕದ ಪದಾಧಿಕಾರಿಗಳು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.
ಆಶ್ರಮ ಶಾಲೆ, ಮಹಿಳಾ ವಸತಿನಿಲಯಗಳ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿ ವಿತರಿಸಿ, ಆಚರಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಈರಣ್ಣ ನಿಂಬಣ್ಣನವರ, ಕಾರ್ಯದರ್ಶಿ ನಿಜಲಿಂಗಪ್ಪ ಪೂಜಾರ, ಜಿಪಂ ಸದಸ್ಯ ಬಸವರಾಜ ಹಾದಿಮನಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ರವಿಚಂದ್ರ ಪುರೋಹಿತ, ತಾಲೂಕು ಅಧ್ಯಕ್ಷ ಈಶ್ವರ ನಿಂಗೋಜಿ, ಪ್ರಧಾನ ಕಾರ್ಯದರ್ಶಿ ವಿನಯ ಬಂಕನಾಳ, ರವಿರಾಜ ಹಾದಿಮನಿ, ಎಸ್.ಆರ್. ಪಾಟೀಲ, ಗೀತಾ ಪೂಜಾರ, ಪ್ರಶಾಂತ ಮುಚ್ಚಂಡಿ, ಸಂಜಯ ಬೇದ್ರೆ, ಪ್ರಮೋದ ದೇಶಪಾಂಡೆ, ಹರೀಶಗೌಡ ಪಾಟೀಲ, ಅನೂಪ ಕಾಗಿನೆಲ್ಲಿ ಡಾ ಹಾದಿಮನಿ ಮುಂತಾದ ಗಣ್ಯರು, ಕಾರ್ಯಕರ್ತರು ಇದ್ದರು.