ಅರಳೇಶ್ವರ-ಕಂಚಿನೆಗಳೂರು ರಸ್ತೆ ಕಾಮಗಾರಿಗೆ ಚಾಲನೆ
ಹಾನಗಲ್ಲ: ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ಅನುದಾನದಲ್ಲಿ ರು. 79 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಅರಳೇಶ್ವರ-ಕಂಚಿನೆಗಳೂರು ರಸ್ತೆ ಕಾಮಗಾರಿಗೆ ಶಾಸಕ ಮನೋಹರ ತಹಶೀಲ್ದಾರ ಶಿಲಾನ್ಯಾಸ ನೆರವೇರಿಸಿದರು.
ಗ್ರಾಮೀಣ ರಸ್ತೆಗಳನ್ನು ಸುಸಜ್ಜಿತಗೊಳಿಸುವ, ಸುಧಾರಣೆ ಕಾಮಗಾರಿಗಳ ಮೂಲಕ ಸಮರ್ಪಕ ಮತ್ತು ಸುಗಮ ಸಂಚಾರಕ್ಕೆ ಗ್ರಾಮಸ್ಥರಿಗೆ ಅನುಕೂಲತೆ ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೊಲಗಳಿಗೆ ಸಂಪರ್ಕದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಈ ರಸ್ತೆಗಳ ದೀರ್ಘ ಬಾಳಿಕೆಯ ವ್ಯವಸ್ಥೆಗಾಗಿ ಗ್ರಾಮಸ್ಥರು ಕಾಳಜಿ ವಹಿಸಬೇಕು ಎಂದರು.
ತಾಪಂ ಸದಸ್ಯ ರಾಜೇಂದ್ರ ಬಾರ್ಕಿ, ಕಂಚಿನೆಗಳೂರ ಗ್ರಾಪಂ ಅಧ್ಯಕ್ಷೆ ಶಕುಂತಲಾ ತಳವಾರ, ಉಪಾಧ್ಯಕ್ಷ ಮಾರ್ತಾಂಡಪ್ಪ ಕತ್ತಿ, ಮುಖಂಡರಾದ ಜಿ.ವಿ. ಕಂಬಾಳಿಮಠ, ವೀರಬಸಯ್ಯ ಗುರುದೇವರಮಠ, ಶಣ್ಮುಖಪ್ಪ ಬೈರಕ್ಕನವರ, ವಿರೂಪಾಕ್ಷಪ್ಪ ತಳವಾರ, ಕೆ.ಟಿ. ಕಲ್ಲಗೌಡ್ರ, ಶಿವಪ್ಪ ಮಾಸನಕಟ್ಟಿ, ಮಂಜುನಾಥ ತಡಸದ, ಚಂದ್ರಶೇಖರ ಕೂಡಲ ಮತ್ತು ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ವೈ. ಬಂಡಿವಡ್ಡರ ಇದ್ದರು.