ರಾಜಕಾರಣಿಗಳಿಗೆ ಅಟಲ್ ಮಾದರಿ: ಅಂಗಡಿ
ಹಿರೇಕೆರೂರು: ಪ್ರಧಾನಿ ಮಂತ್ರಿಯಾಗಿ ದೇಶದ ಉಜ್ವಲ ಭವಿಷ್ಯದ ಕನಸನ್ನು ಕಂಡಿರುವ ಅಟಲ ಬಿಹಾರಿ ವಾಜಪೇಯಿ ಜಾರಿಗೆ ತಂದ ಅನೇಕ ಯೋಜನೆಗಳು ಸಮಾಜಮುಖಿಯಾಗಿವೆ. ರಾಜಕಾರಣಿಗಳು ವಾಜಪೇಯಿಯವರ ಅದರ್ಶಗುಣಗಳನ್ನು ಮೈಗೊಡಿಸಿಕೊಂಡು ಆಡಳಿತ ಮಾಡಬೇಕು ಎಂದು ಬಿಜೆಪಿ ತಾಲೂಕಾಧ್ಯಕ್ಷ ಎಸ್.ಆರ್. ಅಂಗಡಿ ಕರೆ ನೀಡಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಜನ್ಮ ದಿನದ ಅಂಗವಾಗಿ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದ ಅವರು, ವಾಜಪೇಯಿ ಮಾಡಿದ ಚತುಷ್ಪಥ ರಸ್ತೆ ಮತ್ತು ನದಿ ಜೋಡಣೆ ಯೋಜನೆಯಿಂದ ದೇಶದ ದಿಕ್ಕೇ ಬದಲಾಗುತ್ತಿದೆ. ಮುಂದೆ ನರೇಂದ್ರ ಮೋದಿ ಪ್ರಧಾನಿಯಾಗಿ ವಾಜಪೇಯಿವರು ಕಂಡು ಕನಸನ್ನು ನನಸು ಮಾಡಲಿದ್ದಾರೆ ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ಪಾಲಾಕ್ಷಗೌಡ ಪಾಟೀಲ ಮಾತನಾಡಿ, ಅಜಾತ ಶತ್ರು ಎಂದೇ ಪ್ರಸಿದ್ಧರಾದ ವಾಜಪೇಯಿ ಜಾರಿಗೆ ತಂದಿರುವ ಆರೋಗ್ಯ ಯೋಜನೆ ಗ್ರಾಮೀಣ ಬಡ ರೋಗಿಗಳಿಗೆ ವರದಾನ ಎಂದರು.
ಡಾ. ಚಂದ್ರಶೇಖರ, ಬಿಜೆಪಿ ಪದಾದಿಕಾರಿಗಳಾದ ಗಂಗಾಧರ ಮಾಗನೂರ, ನವೀನ ಕಣವಿ, ರುದ್ರೇಶ ಕೋಣನವರ, ರಮೇಶ ಭಾತಮ್ಮನವರ, ಶೇಕಣ್ಣ ಅಡ್ಮನಿ, ಕುಮಾರ ಪೂಜಾರ, ಪರಶುರಾಮ ಬೋಂಗಾಳೆ, ಹೇಮಣ್ಣ ಹುಲ್ಲತ್ತಿ, ಕಂಠಾಧರ ಅಂಗಡಿ, ವೀರಭದ್ರಯ್ಯಮಠದ ಇದ್ದರು.