ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರತಿಭಾ ವಿಕಾಸಕ್ಕೆ ಚಿಣ್ಣರ ಚಿಲುಮೆ: ಸುಬ್ರಹ್ಮಣ್ಯಂ

Lingaraj Badiger
Updated On : 31 Dec 2013, 1:40 am

ರಾಣಿಬೆನ್ನೂರು: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಬೆಳಗಿಸಲು ಟಿಆರ್‌ಡಿಸಿ ಆಶಾ ಕಿರಣ ಸಂಸ್ಥೆ ನಡೆಸುತ್ತಿರುವ ಚಿಣ್ಣರ ಚಿಲುಮೆ ಕಾರ್ಯಕ್ರಮ ಸಹಕಾರಿ ಎಂದು ಆ್ಯಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ಎ.ಎಂ. ಸುಬ್ರಹ್ಮಣ್ಯಂ ಹೇಳಿದರು.
ಟಿಆರ್‌ಡಿಸಿ ಆಶಾಕಿರಣ ಸಂಸ್ಥೆ ಹಾಗೂ ಸರ್ಕಾರಿ ಕೆಜಿಎಸ್ ಮಾದರಿ ಶಾಲೆ ಮೆಡ್ಲೇರಿ ಆಶ್ರಯದಲ್ಲಿ ಶಾಲೆಯ ಸಭಾಭವನದಲ್ಲಿ ಏರ್ಪಡಿಸಿದ್ದ ಚಿಣ್ಣರ ಚಿಲುಮೆ ಕಾರ್ಯಕ್ರಮ ಉದ್ಘಾಟಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ಅವರು, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದರು.
ಎಸ್‌ಡಿಎಂಸಿ ಸದಸ್ಯರಾದ ಚಂದ್ರಪ್ಪ ಪೂಜಾರ, ಟಿಆರ್‌ಡಿಸಿ ಸಂಸ್ಥೆಯ ಗೀತಾ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ದಿಳ್ಳೆಪ್ಪ ವ್ಯಾಪಾರಿ, ಮಾಲತೇಶ ಹುಲಿಹಳ್ಳಿ, ಮಹೇಶ ಪೂಜಾರ, ಮಹ್ಮದ್ ಗೌಸ್ ಅಂಗಡಿ, ಯಲ್ಲಪ್ಪ ಭಾತಿ, ಗಣೇಶ ಶಿಗ್ಲಿ ಮಾತನಾಡಿದರು. ಸ್ಪರ್ಧೆಯಲ್ಲಿ 6 ಹಳ್ಳಿಗಳ 350 ಮಕ್ಕಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement