ಹಾವೇರಿ: ಇಂದು ನಮೋ ಬ್ರಿಗೇಡ್ ಸಭೆ
ಹಾವೇರಿ: ನಮೋ ಬ್ರಿಗೇಡ್ ಸಭೆ ಡಿ. 31ರಂದು ಸಂಜೆ 4 ಗಂಟೆಗೆ ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಬ್ರಿಗೇಡ್ ಸಂಚಾಲಕ ಡಾ ಶಿವಾನಂದ ಕೆಂಭಾವಿ ತಿಳಿಸಿದ್ದಾರೆ. ಪಕ್ಷಾತೀತವಾಗಿ ನರೇಂದ್ರ ಮೋದಿಯವರ ಅಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9448888117 ಸಂಪರ್ಕಿಸಬಹುದು.
ಸಿದ್ಧಾಂತ ಶಿಖಾಮಣಿ ಗ್ರಂಥ ಬಿಡುಗಡೆ ಇಂದು
ಶಿಗ್ಗಾಂವಿ: ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಬಸವೇಶ್ವರ ಜಾಂಝ್ ಪಥಕ್ ಆಶ್ರಯದಲ್ಲಿ ಸಿದ್ಧಾಂತ ಶಿಖಾಮಣಿ ಗ್ರಂಥ ಬಿಡುಗಡೆ ಸಮಾರಂಭವನ್ನು ಡಿ. 31ರಂದು ಮಧ್ಯಾಹ್ನ 12 ಗಂಟೆಗೆ ಏರ್ಪಡಿಸಲಾಗಿದೆ. ಕಾಶಿ ಪೀಠದ ಜಗದ್ಗುರು ಡಾ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಿಗ್ಗಾಂವಿಯ ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಉಪನ್ಯಾಸ ನೀಡಲಿದ್ದಾರೆ. ನಾರಾಯಣಪುರ ಗ್ರಾಪಂ ಸದಸ್ಯ ಬಸವರಾಜ ಕುರಗೋಡಿ, ನಿವೃತ್ತ ಶಿಕ್ಷಕ ಎಸ್.ಜಿ. ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಬಸವೇಶ್ವರ ಜಾಂಝ್ ಪಥಕ್ ಅಧ್ಯಕ್ಷ ರವಿ ಬಂಕಾಪುರ ವಹಿಸಿಕೊಳ್ಳಲಿದ್ದಾರೆ.
ಮುಕ್ತ ಕಬಡ್ಡಿ ಪಂದ್ಯಾವಳಿ
ಶಿಗ್ಗಾಂವಿ: ತಾಲೂಕಿನ ಮೂಕಬಸರಿಕಟ್ಟಿಯ ಬಂಕನಾಥ ಯುವಕ ಸಂಘ, ಹಾವೇರಿ ಜಿಲ್ಲಾ ಅಮೆಚೂರ್ ಸಂಸ್ಥೆ ಮತ್ತು ತೀರ್ಪುಗಾರರ ಮಂಡಳಿ ಸಹಯೋಗದಲ್ಲಿ ಮುಕ್ತ ಕಬಡ್ಡಿ ಪಂದ್ಯಾವಳಿ ಗ್ರಾಮದ ಹಿಪ್ರಾ ಶಾಲೆಯಲ್ಲಿ ಜ. 4ರಂದು ನಡೆಯಲಿದೆ. ಪ್ರಥಮ ಬಹುಮಾನ ರು. 11,111 ಹಾಗೂ ಟ್ರೋಫಿ, ದ್ವಿತೀಯ ರು. 7777, ತೃತೀಯ ರು. 5555, ಚತುರ್ಥ ರು. 2222 ಹಾಗೂ ಟ್ರೋಫಿ ನೀಡಲಾಗುವುದು. ಉತ್ತಮ ದಾಳಿಕೋರ. ಹಿಡಿತಗಾರ, ಸರ್ವೋತ್ತಮ ಆಟಗಾರರಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ಜ. 3ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 7453736615, 7353411472, 9740241124, 8495823203 ಸಂಪರ್ಕಿಸಲು ಕೋರಲಾಗಿದೆ.
ಜಕಣಾಚಾರಿ ಸ್ಮರಣೋತ್ಸವ
ಹಾವೇರಿ: ಅಮರ ಶಿಲ್ಪಿ ಜಕಣಾಚಾರಿ ಅವರ ಸ್ಮರಣೋತ್ಸವ ಜ. 1ರಂದು ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಾವಿರಾರು ಜನರು ತೆರಳಲಿದ್ದಾರೆ ಎಂದು ಸಮಾಜದ ತಾಲೂಕಾಧ್ಯಕ್ಷ ರುದ್ರೇಶ ಬಡಿಗೇರ ತಿಳಿಸಿದ್ದಾರೆ. ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜಕೀಯ ಮುಖಂಡರು, ಮಠಾಧೀಶರು ಪಾಲ್ಗೊಳ್ಳುವರು. ಸಮಾಜದ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು. ಸಮಾಜ ಬಾಂಧವರು ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.