ಅಂಧ ಕಲಾವಿದರ ಸಂಘದ ವಾರ್ಷಿಕೋತ್ಸವ ಇಂದು
ರಾಣಿಬೆನ್ನೂರು: ಅಖಿಲ ಕರ್ನಾಟಕ ಪಂ.ಪಂಚಾಕ್ಷರಿ ಗವಾಯಿಗಳ ಅಂಧ ಕಲಾವಿದರ ಸಂಘ, ಆದಿಶಕ್ತಿ ಗೆಳೆಯರ ಬಳಗಗಳ ಆಶ್ರಯದಲ್ಲಿ ಅಂಧ ಕಲಾವಿದರ ಸಂಘದ 18ನೇ ವಾರ್ಷಿಕೋತ್ಸವ, ಪಂ.ಪಂಚಾಕ್ಷರಿ ಗವಾಯಿಗಳ 121ನೇ ವರ್ಷದ ಜಯಂತ್ಯುತ್ಸವ ಫೆ. 2ರಂದು ಮೇಡ್ಲೆರಿ ರಸ್ತೆಯ ಆದಿಶಕ್ತಿ ಸಭಾ ಭವನದಲ್ಲಿ ನಡೆಯಲಿದೆ ಎಂದು ಆದಿಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಶಿವಪ್ಪ ಗುರಿಕಾರ ತಿಳಿಸಿದರು. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ರಂದು ದೊಡ್ಡಪೇಟೆಯ ವಿರಕ್ತಮಠದ ಗುರುಬಸವ ಸ್ವಾಮಿಗಳು ಉದ್ಘಾಟಿಸುವರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶ್ರೀ ಸಾನ್ನಿಧ್ಯ ವಹಿಸುವರು. ಗದಗ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಬಸವರಾಜಸ್ವಾಮಿ ಹಿಡ್ಕಿಮಠ, ಮಾಜಿ ಶಾಸಕ ಜಿ. ಶಿವಣ್ಣ, ಮಾಜಿ ಸಚಿವ ಕೆ.ಬಿ. ಕೋಳಿವಾಡ, ಬಸವರಾಜ ಪಾಟೀಲ, ಚಂದ್ರಣ್ಣ ತಿಳವಳ್ಳಿ, ರುಕ್ಮಿಣಿ ಸಾಹುಕಾರ, ಭಾರತಿ ಜಂಬಗಿ, ರತ್ನಾ ಪುನಿತ ಆಗಮಿಸುವರು ಎಂದರು. ಪ್ರಕಾಶ ಪಾಟೀಲ, ನಾರಾಯಣ ಜಂಕನೂರು, ವಾಗೀಶ ಗುತ್ತಲಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.