ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಸಿ.ಎಂ. ಉದಾಸಿ ಸಾಕ್ಷ್ಯಚಿತ್ರ ಬಿಡುಗಡೆ

Rashmi Kasaragodu
Updated On : 2 Feb 2013, 11:07 am




ಹಾನಗಲ್ಲ: ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಜೀವನ ಹಾಗೂ ಸಾಧನೆ ಕುರಿತಾದ ಸಾಕ್ಷ್ಯಚಿತ್ರ ಫೆ. 2ರಂದು ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠ ಆವರಣದಲ್ಲಿ ಬಿಡುಗಡೆಗೊಳ್ಳಲಿದೆ.
ಶನಿವಾರ ಬೆಳಗ್ಗೆ 10ಕ್ಕೆ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಸಚಿವ ಸಿ.ಎಂ. ಉದಾಸಿಯವರ 77ನೇ ಹುಟ್ಟುಹಬ್ಬದ ಸವಿ ನೆನಪಿಗಾಗಿ ಶೇಷಗಿರಿಯ ಗಜಾನನ ಯುವಕ ಮಂಡಳ ಹಾಗೂ ಉದಾಸಿ ಅಭಿಮಾನಿ ಬಳಗದ ಆಶ್ರಯದಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ.
ಸಿ.ಎಂ. ಉದಾಸಿ ಹಾನಗಲ್ಲ ಪುರಸಭೆ ಅಧ್ಯಕ್ಷರಾದ ಅವಧಿಯಿಂದ ಶಾಸಕರಾಗಿ, ಸಚಿವರಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ರಾಜಕೀಯ ಹಾಗೂ ವೈಯಕ್ತಿಕ ಜೀವನದ ಮಹತ್ವದ ಘಟ್ಟಗಳ ವಿವಿರ ಇದರಲ್ಲಿದೆ. ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡುವರು. ಹಾವೇರಿ ಜಿಪಂ ಅಧ್ಯಕ್ಷ ಶಂಕರಣ್ಣ ಮಾತನವರ ಅಧ್ಯಕ್ಷತೆ ವಹಿಸುವರು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವಣ್ಣ ತಿಳವಳ್ಳಿ, ಸುರೇಶಗೌಡ್ರು ಪಾಟೀಲ, ಯು.ಬಿ.  ಬಣಕಾರ, ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಪುರಸಭಾಧ್ಯಕ್ಷೆ ಹಸೀನಾಬಿ ನಾಯ್ಕನವರ, ಸಾಕ್ಷ್ಯಚಿತ್ರ ನಿರ್ದೇಶಕ ಎಸ್.ಎಲ್. ಸಂತೋಷ ಅತಿಥಿಗಳಾಗಿ ಆಗಮಿಸುವರು.
ಮಹಾದ್ವಾರ ಉದ್ಘಾಟನೆ ಇಂದು: ಶನಿವಾರ ಸಂಜೆ 6ಕ್ಕೆ ನೂತನ ಶ್ರೀ ಕುಮಾರೇಶ್ವರ ಮಹಾದ್ವಾರ ಉದ್ಘಾಟನೆಗೊಳ್ಳಲಿದೆ. ಶ್ರೀ ಕುಮಾರೇಶ್ವರ ಬಯಲು ರಂಗ ಮಂದಿರಲ್ಲಿ ಧಾರವಾಡದ ಗಣೇಶ ನೃತ್ಯ ಶಾಲೆ ಕಲಾವಿದರಿಂದ ಪುಷ್ಪಾಂಜಲಿ ಹಾಗೂ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ. ಆಮೇಲೆ ಪಂಡಿತ ಪಂಚಾಕ್ಷರ ಗವಾಯಿಗಳನ್ನು ಕುರಿತಾಗಿ 'ಅಂಧರ ಬಾಳಿನ ಬೆಳಕು' ನಾಟಕ ದಾವಣಗೆರೆಯ ವಿದ್ಯಾಸಾಗರ ತಂಡದ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ. ಎಸ್.ಎಲ್. ಸಂತೋಷ್ ನಿರ್ದೇಶಿಸಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಕಾಡಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕೋಲಾಟ, ಹೆಜ್ಜೆ ಗೆಜ್ಜೆ ಕಲಾ ತಂಡದಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement