ಕ್ರೀಡೆಯಿಂದ ಆರೋಗ್ಯ: ಕಾಲೇಬಾಗ
ಸವಣೂರು: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ಸಾಹ ಹೆಚ್ಚುತ್ತದೆ. ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕ್ರೀಡಾಸಕ್ತಿ ಹೆಚ್ಚಿಸಿಕೊಂಡಲ್ಲಿ ಉಜ್ವಲ ಭವಿಷ್ಯ ನಿಮ್ಮದಾಗಲಿದೆ ಎಂದು ಬಿಎಸ್ಸಾರ್ ಮುಖಂಡ ಎಂ.ಡಿ ಕಾಲೇಬಾಗ ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ, ಗ್ರೀನ್ ಸ್ಟಾರ್ ಕ್ರಿಕೆಟ್ ಕ್ಲಬ್ ಏರ್ಪಡಿಸಿದ್ದ ಮುಕ್ತ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಸವರಾಜ ಅಂಗಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.
ಈ ಸಂದರ್ಭಲ್ಲಿ ತಾಲೂಕು ಕ್ರೀಡಾಂಗಣ ಹೋರಾಟ ಸಮಿತಿ ಅಧ್ಯಕ್ಷ ಜೀಶಾನ್ಖಾನ ಪಠಾಣ, ಮುಖಂಡರಾದ ಬಾಬನಸಾಬ ರಾಯಚೂರು, ಖಲೀಲ ಅಹ್ಮದ ನಾಲಬಂದ, ಉಪಾಧ್ಯಕ್ಷ ಅಲ್ತಾಫ ಅಹ್ಮದ ಬೇಪಾರಿ, ಅನ್ವರಸಾಬ ಮುಲ್ಲಾ, ಶೇಖಾವತ್ಖಾನ್ ಅಳ್ನಾವರ, ಅಕ್ಬರ ಬೆಂಗೇರಿ ಮತ್ತಿತರರು ಇದ್ದರು.