ಶರಣ ಸಂಸ್ಕೃತಿ ಉತ್ಸವದಲ್ಲಿ ಇಂದು
ಹಾವೇರಿ: ಇಲ್ಲಿಯ ಹೊಸಮಠದ ಆವರಣದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಮೂರನೇ ದಿನ ಫೆ. 3ರಂದು ಬೆಳಗ್ಗೆ ಡಾ. ಶಿವಮೂರ್ತಿ ಮುರುಘಾ ಶರಣರ ಸಾನ್ನಿಧ್ಯದಲ್ಲಿ ಅಗಡಿ ಸಂಗನಬಸವ ಸ್ವಾಮೀಜಿ, ಬಸವ ತತ್ವ ಧ್ವಜಾರೋಹಣ ನೆರವೇರಿಸುವರು. ನಗರದ ವಿವಿಧ ಶಾಲಾ ಮಕ್ಕಳಿಂದ ಸೈಕಲ್ ಜಾಥಾ ಜರುಗಲಿದೆ. ಸೈಕಲ್ ಜಾಥಾಕ್ಕೆ ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಸಚಿವ ಬಸವರಾಜ ಶಿವಣ್ಣವರ ಚಾಲನೆ ನೀಡುವರು. ಸಂಜೆ 6.30ಕ್ಕೆ ನಿತ್ಯ ಪ್ರಳಯ ನಿವಾರಿಸುವ ಬಗೆ ಕುರಿತ ಚಿಂತನ ಗೋಷ್ಠಿ ಜರುಗಲಿದೆ. ಮೂಡಿ ಶಿವಲಿಂಗ ಶ್ರೀ, ಹಡಗಲಿ ಗವಿಮಠದ ಶಾಂತವೀರ ಶ್ರೀ ಸಾನ್ನಿಧ್ಯ ವಹಿಸುವರು. ಸಾಹಿತಿ ನಾ. ಡಿಸೋಜಾ ಗೋಷ್ಠಿ ಉದ್ಘಾಟಿಸುವರು. ಸಂಸದ ಪ್ರಲ್ಹಾದ ಜೋಶಿ, ಸಿ. ಮಂಜುಳ ಅತಿಥಿಗಳಾಗಿ ಪಾಲ್ಗೊಳ್ಳುವರು.