ಇಂದಿನಿಂದ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ
ರಾಣಿಬೆನ್ನೂರು: ತಾಲೂಕಿನ ಮಾಳನಾಯಕನಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಫೆ. 4 ಮತ್ತು 5ರಂದು ಜರುಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಫೆ. 4ರಂದು ಡೊಳ್ಳು ಕುಣಿತ, ಬಾಜಾ ಭಜನೆ, ಹಲಗೆ, ಕಹಳೆ, ವಾದ್ಯ-ವೃಂದಗಳೊಂದಿಗೆ ಪ್ರಾರಂಭವಾಗುವುದು. ಫೆ. 5ರಂದು ಬೆಳಗ್ಗೆ 7ಕ್ಕೆ ಶ್ರೀದೇವಿಯು ಮಂದಿರ ಪ್ರವೇಶ ಮಾಡುವಳು. 8 ಗಂಟೆಗೆ ಅಭಿಷೇಕಾಚರಣೆಗಳು ಜರುಗಲಿವೆ. ಮಧ್ಯಾಹ್ನ 3ಕ್ಕೆ ಭಕ್ತಾದಿಗಳು ಗಂಡಾರತಿಯೊಂದಿಗೆ ದೇವಿಯ ಉಡಿ ತುಂಬುವರು. ಜಾತ್ರಾ ಮಹೋತ್ವವದ ಸಾನ್ನಿಧ್ಯವನ್ನು ಮಾಳನಾಯಕನಹಳ್ಳಿಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳುವರು.ಜಾತ್ರೋತ್ಸವದಲ್ಲಿ ಶಾಂತಿ, ಸಹನೆಯಿಂದ ವಿವಿಧ ಭಕ್ತಾದಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಶ್ರೀ ದುರ್ಗಾಂಬಿಕಾದೇವಿ ಟ್ರಸ್ಟ್ ಕಮೀಟಿ ಪದಾಧಿಕಾರಿಗಳು, ಉರ ನಾಗರಿಕರು ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.