ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಾ. 26ರಿಂದ ದ್ಯಾಮವ್ವ ದೇವಿ ಜಾತ್ರೆ

Lingaraj Badiger
Updated On : 4 Feb 2013, 12:20 pm

ಹಾನಗಲ್ಲ: ಹಾನಗಲ್ಲಿನಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಶ್ರೀ ಗ್ರಾಮದೇವಿ (ದ್ಯಾಮವ್ವ) ಜಾತ್ರೆಯ ಪೂರ್ವಸಿದ್ಧತಾ ಸಭೆ ಇಲ್ಲಿನ ಡಾ. ಅಂಬೇಡ್ಕರ ಭವನದಲ್ಲಿ ನಡೆಯಿತು. ಪ್ರತಿ ವರ್ಷದಂತೆ ಜಾತ್ರೆಯನ್ನು ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಜಾತ್ರೆಯ ಯಶಸ್ವಿ ನಿರ್ವಹಣೆಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.
ಹಾನಗಲ್ಲಿನ ಈ ಜಾತ್ರೆ 4 ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಈ ಸಲ ಮಾ. 26ರಿಂದ ಆರಂಭಗೊಳ್ಳಲಿದೆ.
ಜಾತ್ರೆ ಸಮಿತಿ ಉಪಾಧ್ಯಕ್ಷ ಎಂ.ಬಿ. ಕಲಾಲ್ ಅಧ್ಯಕ್ಷತೆ ವಹಿಸಿದ್ದರು. ಕಳೆದ ಜಾತ್ರೆಯ ಲೆಕ್ಕಪತ್ರದ ವಿವರ ನೀಡಿದ ಕಲ್ಯಾಣಕುಮಾರ ಶೆಟ್ಟರ್, ರು. 7 ಲಕ್ಷ ಉಳಿತಾಯ ಮಾಡಲಾಗಿದೆ ಎಂದು ತಿಳಿಸಿದರು.
ಸುರೇಶ ರಾಯ್ಕರ, ದುಷ್ಯಂತ ನಾಗರವಳ್ಳಿ, ಬಿ.ಎಸ್. ಅಕ್ಕಿವಳ್ಳಿ,ನಾಗೇಂದ್ರ ತುಮರಿಕೊಪ್ಪ, ರಾಮಣ್ಣ ಮಾಸನಕಟ್ಟಿ, ಯಲ್ಲಪ್ಪ ಕಿತ್ತೂರು, ಹನುಮಂತಪ್ಪ ನಾಗಜ್ಜನವರ್, ರಮೇಶ ಚಿನ್ನಮುಳಗುಂದ, ಎಂ.ಎಚ್. ಕಲಾಲ, ಬಲ್ಲಣ್ಣ ಬಂಕಾಪುರ,ಪಿ.ವೈ. ಗುಡಗುಡಿ ಉಪಸ್ಥಿತರಿದ್ದು, ಸಲಹೆ-ಸೂಚನೆ ನೀಡಿದರು.
--
ಗುರಿ ಇಲ್ಲದೆ ಸಾಧನೆ ಇಲ್ಲ
ಶಿಗ್ಗಾಂವಿ: ಗುರಿಯಿಲ್ಲದೆ ಸಾಧನೆ ಮಾಡಲಸಾಧ್ಯ ಎಂದು ತಾಪಂ ಇಓ ಬಿ. ರೇವಣ್ಣ ಹೇಳಿದರು. ಪಟ್ಟಣದ ಸರ್ಕಾರಿ ಪರಿಶಿಷ್ಟ ಜಾತಿಯ ವಸತಿ ಪಾಠ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ನಮ್ಮ ಮೆದುಳಿಗೆ ಅಗಾಧವಾದ ಶಕ್ತಿ ಇದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಶೈಕ್ಷಣಿಕವಾಗಿ ಮಕ್ಕಳು ಬಲಶಾಲಿಗಳಾಗಬೇಕು ಎಂದರು. ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಶ್ರೀ ನಿವಾಸ ಜೋಶಿ ಮಾತನಾಡಿ, ಎಸ್‌ಬಿಐ ಶಾಖೆಯಿಂದ ಮುಗಳಿ ಶಾಲೆಗೆ ಡೆಸ್ಕ್‌ಗಳು, ಸೋಲಾರ ದೀಪ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ ಎಂದರು. ಕೆ.ಎಂ. ಜಗದೇವಯ್ಯ, ಪಿ.ಎ. ಭಜಂತ್ರಿ, ವಿ.ವಿ. ಚೊಂಚಳ್ಳಿ, ಮಂಗಳಾ ಪಾಟೀಲ, ರೂಪಾ ಸುಣಗಾರ, ಚಿದಂಬರ ವಿ. ಚೊಂಚಳ್ಳಿ, ಸುರೇಖಾ ಭೀಮನಗೌಡ್ರ, ಸುಮಲತಾ ಪಾಟೀಲ, ಜಯಶ್ರೀ ಕಾರಡಗಿ, ಸುಜಾತಾ ಕಡೆಮನಿ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement