ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸರ್ಕಾರ ಕೃತಕ ಉಸಿರಾಟ

Lingaraj Badiger
Updated On : 4 Feb 2013, 12:14 pm

ಬ್ಯಾಡಗಿ: ಸರ್ಕಾರ ಕೃತಕ ಉಸಿರಾಟದಲ್ಲಿ ನಿಂತಿದೆ. ಬಿಜೆಪಿ ಚಿಹ್ನೆಯಡಿ ಆಯ್ಕೆಯಾದ ಶಾಸಕರೇ ಸರ್ಕಾರಕ್ಕೆ ಕೊನೆ ಮೊಳೆ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಲೇವಡಿ ಮಾಡಿದರು. ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಲ್ಲಿದ್ದವರಿಗೆ ನೈತಿಕತೆಯಿದ್ದರೆ ಇಂದೇ ಸರ್ಕಾರ ವಿಸರ್ಜಿಸಿ ಚುನಾವಣೆ ಎದುರಿಸಲಿ. ತಮ್ಮದೇ ಶಾಸಕರು ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು ರಾಜಿನಾಮೆ ಸಲ್ಲಿಸಿದರೂ ಶತಾಯ, ಗತಾಯ ಅಧಿಕಾರದ ಕೊನೆ ದಿನಗಳನ್ನು ಸವಿಯುವ ಉದ್ದೇಶದಿಂದ ವಿಧಾನಸಭಾಧ್ಯಕ್ಷರ ಕೊಠಡಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ರಾಜ್ಯಕ್ಕೆ ಮಾರಕ: ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾರಕವಾಗಲಿದೆ. ಶಿಸ್ತಿನ ಪಕ್ಷ ಎನ್ನುತ್ತಲೇ ಅಶಿಸ್ತು ಪ್ರದರ್ಶಿಸಿದ ಬಿಜೆಪಿಗೆ ಬರುವ ದಿನಗಳಲ್ಲಿ ಅಧಿಕಾರ ಎಂಬುದು ತಿರುಕನ ಕನಸು ಎಂದರು.
ಸಂವಿಧಾನಿಕ ಬಾಹೀರ ಚಟುವಟಿಕೆ: ಸಂವಿಧಾನ ದೇಶದ ಪವಿತ್ರ ಆಸ್ತಿ. ಅದರ ದುರ್ಬಳಕೆ ಹಾಗೂ ಸಂವಿಧಾನ ಬಾಹೀರ ಚಟುವಟಿಕೆಗಳನ್ನು ಕಳೆದ ನಾಲ್ಕುವರೆ ವರ್ಷದಿಂದ ರಾಜ್ಯದ ಆರು ಕೋಟಿ ಜನ ವೀಕ್ಷಿಸುತ್ತಾ ಬಂದಿದ್ದಾರೆ. ಆಪರೇಶನ್ ಕಮಲದ ಮೂಲಕ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ ಬಿಜೆಪಿಗೆ ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದರು.
ಫೆ. 10ರಂದು ಬೃಹತ್ ಸಮಾವೇಶ: ಸರ್ಕಾರದ ವೈಫಲ್ಯ ಖಂಡಿಸುವುದು ಸೇರಿದಂತೆ ಕಾಂಗ್ರೆಸ್ ಪಕ್ಷದ ಸಂಘಟನೆ ದೃಷ್ಟಿ ಹಿನ್ನೆಲೆಯಲ್ಲಿ ಬ್ಯಾಡಗಿ ತಾಲೂಕು ಕ್ರೀಡಾಂಗಣದಲ್ಲಿ ಫೆ. 10ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸುಮಾರು 15ರಿಂದ 20 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ ಎಂದರು.
ಯಾರ್ಯಾರು: ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ, ಸಿದ್ಧರಾಮಯ್ಯ, ಎಚ್.ಕೆ.ಪಾಟೀಲ, ಬಸವರಾಜ ರಾಯರೆಡ್ಡಿ, ಸಿ.ಎಂ. ಇಬ್ರಾಹಿಂ, ಸಂತೋಷ್ ಲಾಡ್, ಇನ್ನಿತರ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು. ಈ ಸಂದರ್ಭ ಕೆಪಿಸಿಸಿ ಸದಸ್ಯ ಬಸವರಾಜ ಸವಣೂರು, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ಎಚ್. ದೊಡ್ಮನಿ, ಕಾಗಿನೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಪಾಟೀಲ, ದಾನಪ್ಪ ಚೂರಿ, ಲಿಂಗಪ್ಪ ಕೊಂಬಳಿ, ರಮೇಶ್ ಸುತ್ತ್ತಕೋಟಿ, ಶೇಖಣ್ಣ ಮೈಲಾರ, ಡಿ.ಆರ್. ಚನ್ನಗೌಡ್ರ, ನಾಗಪ್ಪ ಬಣಕಾರ, ಬೀರಪ್ಪ ಬಣಕಾರ, ರುದ್ರಪ್ಪ ಹೊಂಕಣ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement