ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಲೆ ಪ್ರದರ್ಶನಕ್ಕೆ ಸ್ನೇಹ ಸಮ್ಮೇಳನ ವೇದಿಕೆ

Lingaraj Badiger
Updated On : 6 Feb 2013, 11:11 am

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಫೆ. 5
ಪ್ರತಿಯೊಬ್ಬ ಮನುಷ್ಯನಲ್ಲಿ ಅಗಾಧವಾದ ಹಾಗೂ ಸಮಾಜದ ಮೇಲೆ ಬೆಳಕು ಚೆಲ್ಲುವ ಸಾಹಿತ್ಯಿಕ ಕಲೆಗಳು ಅಡಗಿವೆ. ಅಂತಹ ಕಲೆಗಳನ್ನು ಹೊರಹಾಕಲು ಶಾಲಾ ಕಾಲೇಜುಗಳಲ್ಲಿ ಏರ್ಪಡಿಸುವ ಸ್ನೇಹ ಸಮ್ಮೇಳನದ ವೇದಿಕೆ ಸೂಕ್ತವಾಗಿವೆ ಎಂದು ಶಾಸಕ ಬಿ.ಸಿ. ಪಾಟೀಲ್ ನುಡಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಎನ್‌ಎಸ್‌ಎಸ್ ಚಟುವಟಿಕೆ  ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳು ಪೈಪೋಟಿಯಿಂದ ಕೂಡಿವೆ, ಇಂತಹ ಪೈಪೋಟಿಯನ್ನು ಎದುರಿಸುವಂತಾಗಲು ಶ್ರಮವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳು ಸಜ್ಜಾಗಬೇಕು. ಇಂಥಹ ವೇದಿಕೆಗಳ ಮೂಲಕ ಪ್ರತಿಭೆಗಳು ಅನಾವರಣಗೊಳ್ಳಬೇಕಾಗಿದೆ. ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು, ಶಿಕ್ಷಣ ಪಡೆದು ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ವಿದ್ಯಾರ್ಥಿಗಳಿಗೆ ಹಾರೈಸಿದರು. ಅತಿಥಿಗಳಾಗಿ ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಮಹ್ಮದ್‌ಸಾಬ ವಡ್ಡಿನಕಟ್ಟಿ, ಚನ್ನೇಶ ದೀವಿಗಿಹಳ್ಳಿ, ರುದ್ರಪ್ಪ ತಡಸನಹಳ್ಳಿ, ತಾಪಂ ಸದಸ್ಯ ಆರ್.ಎನ್. ಗಂಗೋಳ, ಪ್ರಾಚಾರ್ಯ ಅಪ್ರೋಜ್ ಅಲಿಖಾನ್, ದೊಡ್ಡಗೌಡ ಪಾಟೀಲ, ಉಪನ್ಯಾಸಕ ಟಿ.ಎಚ್. ಪೂಜಾರ, ಎಸ್.ಎಸ್. ಆರಾಧ್ಯಮಠ, ಎಚ್.ಎಫ್. ಎಮ್ಮಿ, ಚಂದ್ರಶೇಖರ ರೋಣದ, ಸಿ.ಎನ್. ಮಡಿವಾಳರ, ರಾಘವೇಂದ್ರ ಬಿ.ಜಿ, ಶಾರದಾ ಪಾಟೀಲ, ಕವಿತಾ ಹಳಕಟ್ಟಿ, ನಾಗಭೂಷಣ ಕೆ, ವಜ್ರಕುಮಾರ ಉಪ್ಪಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಸಕ ಬಿ.ಸಿ.ಪಾಟೀಲ ಬಹುಮಾನ ವಿತರಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement