ಪಂಚಮಸಾಲಿ ಮಹಾಂತ ಶ್ರೀಗಳಿಗೆ ಶ್ರದ್ಧಾಂಜಲಿ
ಹಾನಗಲ್ಲ: ವೀರಶೈವ ಪಂಚಮಸಾಲಿ ಪೀಠದ ಸ್ಥಿರಪೀಠಾಧ್ಯಕ್ಷ ಡಾ ಮಹಾಂತ ಶ್ರೀಗಳು ಪಂಚಮಸಾಲಿ ಜನಾಂಗದ ಜಾಗೃತಿಗೆ ಶ್ರಮಿಸಿ, ಪೀಠ ಸ್ಥಾಪನೆಯ ಮಹತ್ತರ ಕಾರ್ಯ ಮಾಡಿದ್ದು ಅವಿಸ್ಮರಣೀಯ ಎಂದು ಸಮಾಜದ ಮುಖಂಡ ಎ.ಎಸ್. ಬಳ್ಳಾರಿ ನುಡಿದರು.
ಡಾ ಮಹಾಂತ ಶ್ರೀಗಳು ಲಿಂಗೈಕ್ಯರಾದ ಪ್ರಯುಕ್ತ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಗಳ ಶ್ರಮದಿಂದ ಪಂಚಮಸಾಲಿ ಜನಾಂಗ ಈಗ 2ಎ ಮೀಸಲಾತಿಗೆ ಸೇರಿಸುವ ಪ್ರಯತ್ನ ಯಶಸ್ಸಿನ ಹಾದಿಯಲ್ಲಿದೆ. ಪೀಠ ಸ್ಥಾಪನೆಯಿಂದ ಇಡೀ ಸಮಾಜ ಒಟ್ಟಾಗಲು ಸಾಧ್ಯವಾಗಿದೆ ಎಂದರು. ಸಭೆಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಮಾಲತೇಶ ಸೊಪ್ಪಿನ, ಎನ್.ಎಸ್. ಪಡೆಪ್ಪನವರ, ಮಾರುತಿ ಶಿಡ್ಲಾಪುರ, ನಾಗಪ್ಪ ಶಿವಣ್ಣನವರ, ರಾಜಣ್ಣ ಬೆಟಗೇರಿ, ಸೈದಣ್ಣನವರ, ನಿಜಲಿಂಗಪ್ಪ ಮುದೆಪ್ಪನವರ, ಬಾಬಣ್ಣ ಪಟ್ಟಣಶೆಟ್ಟಿ, ಯಲ್ಲಪ್ಪ ಮಾವೂರ, ಎಲ್.ಎಸ್. ಶಿವಣ್ಣವರ, ಕುಳೇನೂರ, ಮಳೆಣ್ಣನವರ, ಶಿವಣ್ಣ ಹೋತನಹಳ್ಳಿ, ಬಸವರಾಜ ಸೂರಗೊಂಡರ, ಕಲ್ಲಪ್ಪ ಪೂಜಾರ ಇದ್ದರು.