ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಗ್ಗಾಂವಿಯಲ್ಲಿ ಕ್ರಿಕೆಟ್ ಪಂದ್ಯ: ಬಹುಮಾನ ವಿತರಣೆ

Lingaraj Badiger
Updated On : 7 Feb 2013, 11:27 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 6
ಗೆಲುವು ಯಾರಿಗೆ ಬಂದರೂ ಚಿಂತೆ ಇಲ್ಲ. ಶಾಂತಿ, ಸಹನೆ ಹಾಗೂ ಕ್ರೀಡಾ ಮನೋಭಾವದಿಂದ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಂಡು ಪ್ರತಿಭೆ ತೋರಿಸಬೇಕೆಂದು ಯುವ ಧುರೀಣ ಪಿ.ಡಿ. ಕಾಳಿ ಕರೆ ನೀಡಿದರು.
ತಾಲೂಕಿನ ಕುನ್ನೂರ ಗ್ರಾಮದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಂಘಟಕ ಸುಮಂತಗೌಡ ಪಾಟೀಲ ಮಾತನಾಡಿದರು. ಯುವ ಮುಖಂಡ ಮಹಾವೀರ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ತಡಸದ ಸ್ವಾಮಿ ವಿವೇಕಾನಂದ ಕ್ರಿಕೆಟ್ ಕ್ಲಬ್ ಪ್ರಥಮ, ಕುನ್ನೂರಿನ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ದ್ವಿತೀಯ ಹಾಗೂ ಕ್ಯಾಲಕೊಂಡ ತಂಡ ತೃತೀಯ ಬಹುಮಾನ ಪಡೆದವು. ಆನಂದಗೌಡ ಪಾಟೀಲ, ಚಂದ್ರು ಚಿತ್ರಗಾರ, ಮಾಬೂಸಾಬ ಜಿಗಳೂರ, ಎಂ.ಕೆ. ಮುಲ್ಲಾ, ಯಮನಪ್ಪ ನವಲೂರ, ಶಶಿಧರಗೌಡ ಪಾಟೀಲ, ಬಸವರಾಜ ಗೊಬ್ಬಿ, ಸಿ.ಬಿ. ಪೊಲೀಸ್‌ಪಾಟೀಲ, ಮಹೇಶ ಪತ್ತಾರ, ನಾಗರಾಜ ಹಿರೇಮಠ, ಬಾಹುಬಲಿ ಸಾವಂತಣ್ಣವರ, ನಾಗರಾಜ ಸೋಗಲಿ, ಸಿದ್ದನಗೌಡ್ರ ಪಾಟೀಲ ಇದ್ದರು. ಎಂ.ಬಿ. ಹಿರೇಮಠ ಸ್ವಾಗತಿಸಿದರು. ಟಾಕನಗೌಡ್ರ ಪಾಟೀಲ ನಿರ್ವಹಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement