ಸವಣೂರು: ಕಿಶೋರಿಯರಿಗೆ ತರಬೇತಿ ಕಾರ್ಯಕ್ರಮ
ಸವಣೂರು: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಿಶೋರಿ ಶಕ್ತಿ ಯೋಜನೆಯಡಿ ಇತ್ತೀಚೆಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪ್ರಾಸ್ತಾವಿಕ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಬಣಕಾರ, ಕಿಶೋರಾವಸ್ಥೆಯಲ್ಲಿನ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳು ಹಾಗೂ ಎದುರಾಗುವ ಸಂದೇಹಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಉಪನ್ಯಾಸಕ ಆರ್.ಕೆ. ದೇಶಪಾಂಡೆ, 13ರಿಂದ 19ರ ಕಿಶೋರಾವಸ್ಥೆಯಲ್ಲಿ ಶಾರೀರಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೈಹಿಕ, ಮಾನಸಿಕ ಸದೃಢತೆ ಹೊಂದಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಎಂದು ತಿಳಿಸಿದರು.
ಎನ್.ಎಸ್. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎನ್.ಎನ್. ದ್ಯಾಮನಗೌಡ್ರ, ಮೇಲ್ವಿಚಾರಕಿ ಜಯಶ್ರೀ ಕಾಲಕೊಪ್ಪ ನಿರ್ವಹಿಸಿದರು. ಡಿ.ಎನ್. ಬಿಂಗೆ, ಜಯಶ್ರೀ ಕಾವಲಕೊಪ್ಪ, ಮಂಜು ಹಾಜರಿದ್ದರು.