ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೈನಿಕರಂತೆ ಮುನ್ನುಗ್ಗಿ ಸಂತ್ರಸ್ತರಿಗೆ ನೆರವಾಗಿ

Lingaraj Badiger
Updated On : 7 Feb 2013, 11:27 am

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 6
ಸುನಾಮಿ, ನೆರೆಪ್ರವಾಹ, ಬರ, ಭೂಕಂಪ, ಜ್ವಾಲಾಮುಖಿ ಮುಂತಾದ ನೈಸರ್ಗಿಕ ವಿಪತ್ತುಗಳು ಕಂಡು ಬಂದಾಗ ಯುವಕರು ಸಂತ್ರಸ್ತರು ಹಾಗೂ ಗಾಯಾಳುಗಳ ಸಹಾಯಕ್ಕಾಗಿ ಸೈನಿಕರಂತೆ ಮುನ್ನುಗ್ಗಬೇಕೆಂದು ಹಾವೇರಿ ಜಿಲ್ಲಾ ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಡಾ೤ ಎಸ್.ಪಿ. ಶಂಕ್ರಪ್ಪನವರ ಕರೆ ನೀಡಿದರು.
ಇಲ್ಲಿನ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ರೆಡ್‌ಕ್ರಾಸ್ ಯುವಘಟಕ ಉದ್ಘಾಟಿಸಿದ ಅವರು, ಸಾಮಾಜಿಕ ಕಾರ್ಯಗಳಲ್ಲಿ ಯುವ ಶಕ್ತಿಯ ಬಳಕೆಯಾಗಬೇಕಾಗಿದೆ. ರೆಡ್ ಕ್ರಾಸ್ ಯುವ ಘಟಕದ ಸರ್ವ ಸದಸ್ಯರು ಶುಶ್ರೂಷೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಂಗವಿಕಲರಿಗೆ ಸಹಾಯ, ಪ್ರಕೃತಿ ವಿಕೋಪಗಳಿಂದ ಚದುರಿ ಹೋಗಿರುವ ಕುಟುಂಬಗಳಿಗೆ ಸಾಂತ್ವನ ಹೇಳುವ ಕಾರ್ಯ ಯುವಕರಿಂದ ಆಗಬೇಕಿದೆ ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ೤ ಬಿ.ಎಸ್. ಗೌಡರ ಮಾತನಾಡಿ, ಸಾಂಕ್ರಾಮಿಕ ರೋಗ ತಡೆಗಟ್ಟಲು ಪೌರ ಕಾರ್ಮಿಕರಂತೆ ಯುವಕರು ನಗರದಲ್ಲಿ ಕಸ ನಿಯಂತ್ರಣ ಕಾರ್ಯಕ್ರಮದಲ್ಲಿ ತೊಡಗುವ ಅನಿವಾರ್ಯತೆ ಇದೆ. ನಗರಸಭೆ ಕೆಲಸ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಮಾನವೀಯ ಕೆಲಸಗಳಲ್ಲಿ ಭಾಗಿಯಾಗಬೇಕು ಎಂದರು.
ರಾಜ್ಯ ರೆಡ್‌ಕ್ರಾಸ್ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಸ್. ಕೋರಿಶೆಟ್ಟರ ಮಾತನಾಡಿ, ಬಡ-ನಿರ್ಗತಿಕರ ಸೇವೆಗೆ ಮುಂದಾಗಬೇಕು. ಸಂಕುಚಿತ ಮನೋಭಾವ ಬದಿಗೊತ್ತಿ ಕರುಣೆ ತೋರಬೇಕು. ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಭಾರತ 2014ರ ವೇಳೆಗೆ ಪೋಲಿಯೋ ಮುಕ್ತ ದೇಶವಾಗಲು ಸಹಕರಿಸಬೇಕು ಎಂದರು.
ಹಾವೇರಿ ಜಿಲ್ಲಾ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಎಂ.ಸಿ. ಕೊಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಡಾ೤ ಎನ್.ಆರ್. ಬಿರಸಾಲ ಯುವ ರೆಡ್‌ಕ್ರಾಸ್ ಘಟಕವನ್ನು ಪರಿಚಯಿಸಿದರು.  ಗೀತಾ ಮಂಕಣಿ ಸ್ವಾಗತಿಸಿದರು.  ಹಬೀಬ ಖತೀಬ ಯುವ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಾಚಾರ್ಯ ಡಾ೤ ಬಿ.ಸಿ. ಬನ್ನೂರ ಅಧ್ಯಕ್ಷತೆ ವಹಿಸಿದ್ದರು. ಸಬರಿನ್ ತಾಜ್ ಢಲಾಯತ್ ವಂದಿಸಿದರು. ಪ್ರೊ೤ ಎನ್. ಕೆಂಚವೀರಪ್ಪ ನಿರ್ವಹಿಸಿದರು. ವರ್ಷಾ ಪಾಟೀಲ ಮತ್ತು ಶ್ರೀದೇವಿ ಮಹಾಂತ ಪ್ರಾರ್ಥಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ೤ ಸಿ. ಮಲ್ಲಣ್ಣ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement