ಸ್ಟವ್ ಸಿಡಿದು ಯುವತಿ ಸಾವು
ಹಾವೇರಿ: ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಟವ್ ಸಿಡಿದು ಯುವತಿಯೋರ್ವಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಅಸುನೀಗಿದ ಘಟನೆ ಬ್ಯಾಡಗಿ ತಾಲೂಕು ತೆರೆದಹಳ್ಳಿಯಲ್ಲಿ ಜರುಗಿದೆ. ಮೃತಳನ್ನು ಶಮೀಮ್ ಬೇಗಂ ಅಲ್ಲಾವುದ್ದೀನ್ (20) ಎಂದು ಗುರುತಿಸಲಾಗಿದೆ. ತೀವ್ರವಾಗಿ ಸುಟ್ಟಗಾಯಗಳಿಂದ ಬಳಲುತ್ತಿದ್ದ ಈಕೆಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಪಚಾರ ಫಲಿಸದೇ ಯುವತಿ ಮೃತಪಟ್ಟಿರುವುದಾಗಿ ಹೈದರಲಿ ಮಹ್ಮದ್ ಬಾಬುಜಾನ್ ಹಲಗೇರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಕಾಲುಜಾರಿ ಬಿದ್ದು ಮಹಿಳೆ ಸಾವು
ಹಾವೇರಿ: ಮೆಟ್ಟಿಲಿನಿಂದ ಇಳಿಯುತ್ತಿದ್ದಾಗ ಮಹಿಳೆಯೋರ್ವಳು ಕಾಲುಜಾರಿ ಬಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಮೃತಪಟ್ಟ ಘಟನೆ ರಾಣಿಬೆನ್ನೂರು ತಾಲೂಕು ಗುಡ್ಡದ ಬೇವಿನಹಳ್ಳಿಯಲ್ಲಿ ಜರುಗಿದೆ. ಮೃತಳನ್ನು ಲಲಿತಮ್ಮ ಮಂಜಪ್ಪ ತಳವಾರ (42) ಎಂದು ಗುರುತಿಸಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಸೇವಿಸಿ ವ್ಯಕ್ತಿ ಸಾವು
ಹಾವೇರಿ: ದೊಂಬರಾಟದ ವ್ಯಕ್ತಿಯೋರ್ವ ಮಧ್ಯಾಹ್ನವೇ ಮದ್ಯ ಸೇವಿಸಿ ಸಾವನ್ನಪ್ಪಿದ ಘಟನೆ ಶಿಗ್ಗಾಂವಿ ತಾಲೂಕು ಹೊಸೂರ ಗ್ರಾಮದಲ್ಲಿ ಜರುಗಿದೆ. ಮೃತನನ್ನು ಧರ್ಮಾ ಶೇಖರಪ್ಪಾ ಆರೇಡೊಂಬರ (30) ಎಂದು ಗುರುತಿಸಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.