ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗಂಗಾಮತ ಸಮಾವೇಶ: ಇಂದು ಪ್ರತಿಭಟನೆ

Parashurama
Updated On : 8 Feb 2013, 11:25 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 7
ಪಟ್ಟಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಗಂಗಾಮತಸ್ಥರ ಸಮಾವೇಶ ವಿರೋಧಿಸಿ ಫೆ. 8ರಂದು ಪ್ರತಿಭಟನೆ ನಡೆಸಲಾಗುವುದು. ಸಮಾವೇಶಕ್ಕೆ ಅವಕಾಶ ನೀಡುವುದಿಲ್ಲ, ಸಮಾಜವನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಿ ದಾರಿ ತಪ್ಪಿಸುವ ಕೆಲಸ ಸಹಿಸುವುದಿಲ್ಲ ಎಂದು ಗಂಗಾಮತ ಸಮಾಜದ ಹಾವೇರಿ ಜಿಲ್ಲಾಧ್ಯಕ್ಷ ಶಿವಶಂಕರ ಬಾರ್ಕಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ. 14ರಂದು ಗಂಗಾಮತ ಸಮಾಜದ ಸಮಾವೇಶ ನಡೆಸಲು ಮುಂದಾಗಿರುವ ಬಿ.ಕೆ. ಮೋಹನಕುಮಾರ ಅವರು ಹಾವೇರಿ ಜಿಲ್ಲೆ ಹಾಗೂ ಹಾನಗಲ್ಲ ತಾಲೂಕಿನಲ್ಲಿ ಯಾರನ್ನೂ ಸಂಪರ್ಕಿಸಿಲ್ಲ. ಆದಾಗ್ಯೂ ಗಂಗಾಮತಸ್ಥರ ನಡಿಗೆ ಕಾಂಗ್ರೆಸ್ ಕಡೆಗೆ ಎಂಬ ತಲೆಬರಹದಡಿ ಇಡೀ ಸಮಾಜವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಗಂಗಾಮತ ಸಮಾಜದವರು ಎಲ್ಲ ಪಕ್ಷಗಳಲ್ಲಿಯೂ ನಾಯಕರಾಗಿ ಬೆಳೆದಿದ್ದಾರೆ. ನಮ್ಮ ಸಮಾಜದವರು ಯಾವುದೇ ಪಕ್ಷದಲ್ಲಿದ್ದರೂ ಅಭ್ಯಂತರವಿಲ್ಲ ಎಂದರು.
ಸ್ವಾಮೀಜಿ ಭಾವಚಿತ್ರ ಬಳಕೆ
ಹಾವೇರಿಯಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ಸಭೆಗೂ ಅವರು ಬರಲಿಲ್ಲ. ಹೀಗಿದ್ದರೂ ಜಿಲ್ಲೆಯಲ್ಲಿ ರಥ ಯಾತ್ರೆ ನಡೆಸುತ್ತಿರುವುದು ಖೇದದ ಸಂಗತಿ. ಇದರಿಂದ ಸಮಾಜ ಆಕ್ರೋಶಕ್ಕೆ ಒಳಗಾಗುವ ಸಂದರ್ಭಗಳಿವೆ. ಶಾಂತಮುನಿ ಸ್ವಾಮೀಜಿಯವರ ಭಾವಚಿತ್ರವನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದಕ್ಕೂ ವಿರೋಧವಿದೆ. ಹಾನಗಲ್ಲ ತಾಲೂಕಿನಲ್ಲಿ ಸಮಾವೇಶ ನಡೆಯಲು ಬಿಡುವುದಿಲ್ಲ. ಸಮಾಜದ ಎಲ್ಲರೂ ಈ ಸಮಾವೇಶ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸುರೇಶ ಶಿವಣ್ಣನವರ, ಶಿವಾನಂದ ದೇಸಾಯಿ, ಕೃಷ್ಣಮೂರ್ತಿ ವಡ್ನಿಕೊಪ್ಪ, ನಾಗರಾಜ ತುಮರಿಕೊಪ್ಪ, ಮಂಜುನಾಥ ಸುಣಗಾರ, ಅಶೋಕ ಅರೇಗೊಪ್ಪ, ಹನುಮಂತಪ್ಪ ಮಲಗುಂದ, ಸಿದ್ದರಾಮಣ್ಣ ಚಿಕ್ಕಣ್ಣನವರ, ಕೇಶವ ಶೇಷಗಿರಿ, ಮಂಜುನಾಥ ತಳವಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments