ಗೌರಾಪುರದಲ್ಲಿ ಕಾನೂನು ರಥಯಾತ್ರೆ
ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಪಂ, ತಾಪಂ ಹಾಗೂ ಕುಳೇನೂರ ಗ್ರಾಪಂ ಆಶ್ರಯದಲ್ಲಿ ಕಾನೂನು ರಥಯಾತ್ರೆ ಅಂಗವಾಗಿ, ಕಾನೂನು ಅರಿವು ನೆರವು ಮತ್ತು ಲೋಕ ಅದಾಲತ್ ಕಾರ್ಯಕ್ರಮ ಗೌರಾಪುರ ಗ್ರಾಮದಲ್ಲಿ ಇತ್ತೀಚೆಗೆ ಜರುಗಿತು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಸಂದೇಶ್ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಕಾನೂನು ತಿಳಿವಳಿಕೆ ಅಗತ್ಯವಾಗಿದೆ. ಸಮಾಜದ ಪ್ರತಿಯೊಬ್ಬ ಪ್ರಜೆಯೂ ಕಾನೂನು ಅರಿಯಬೇಕೆಂದು ಸಲಹೆ ಮಾಡಿದರು. ಕುಳೇನೂರ ಗ್ರಾಪಂ ಅಧ್ಯಕ್ಷೆ ಜಯಕ್ಕ ಹಾವೇರಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ಬಿ. ವೆಂಕಟೇಶ, ಪುಷ್ಪಾ ಡಬ್ಬಣ್ಣನವರ, ಕಲ್ಲವ್ವ ದೇವಗಿರಿ, ಪ್ರಭುರಾಜ ವರ್ದಿ ಹಾಗೂ ಪ್ರಕಾಶ ಮೂಡಿ ಭಾಗವಹಿಸಿದ್ದರು. ವಿ.ಎಸ್. ಕೋಣನಹಳ್ಳಿ ಹಾಗೂ ಗ್ರಾಪಂ ಅಧಿಕಾರಿ ಕೆ. ವಿಶ್ವನಾಥ ಉಪನ್ಯಾಸ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.