ನಾಳೆ ನ್ಯಾಯವಾದಿಗಳ ಸಮ್ಮೇಳನ
ರಾಣಿಬೆನ್ನೂರು: ರಾಜ್ಯ ವಕೀಲರ ಪರಿಷತ್ ಹಾಗೂ ತಾಲೂಕು ನ್ಯಾಯವಾದಿಗಳ ಸಂಘಗಳ ಆಶ್ರಯದಲ್ಲಿ ಫೆ. 9ರಂದು ನ್ಯಾಯಾಲಯದ ಆವರಣದಲ್ಲಿ ವಿಭಾಗ ಮಟ್ಟದ ನ್ಯಾಯವಾದಿಗಳ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ರಾಜ್ಯ ವಕೀಲರ ಪರಿಷತ್ ಸದಸ್ಯ ಕೆ. ಶಿವಲಿಂಗಪ್ಪ ತಿಳಿಸಿದರು.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಭಾಗಮಟ್ಟದ ವಕೀಲರ ಸಮ್ಮೇಳನದಲ್ಲಿ ಬೆಳಗಾವಿ, ಧಾರವಾಡ, ಕಾರವಾರ, ಗದಗ, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಇತರೆ ನಗರಗಳಿಂದ ಸುಮಾರು 3 ಸಾವಿರ ನ್ಯಾಯವಾದಿಗಳು ಬರುವ ನಿರೀಕ್ಷೆ ಇದೆ. ಕಾನೂನುಗಳ ಕುರಿತು ಮಾಹಿತಿ ನೀಡಲು ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಧಿಶರನ್ನು, ಪರಿಣಿತರನ್ನು ಆಹ್ವಾನಿಸಲಾಗಿದೆ ಎಂದರು. ತಾಲೂಕು ವಕೀಲರ ಸಂಘದ ಶೇಖರ ಬಣಕಾರ, ಹಿರಿಯ ನ್ಯಾಯವಾದಿ ಎಸ್.ಎಲ್. ಪಾಟೀಲ, ಕೊರಧಾನ್ಯಮಠ, ಶಿವಕುಮಾರ ಮುದ್ದಪ್ಪಳವರ, ಇತರರು ಉಪಸ್ದಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.