ಅನುದಾನ ವಿತರಣೆ ತಾರತಮ್ಯ: ಆರೋಪ
ಸವಣೂರು: ತಾಲೂಕಿನ ಮಂತ್ರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಿರುವ ರಾಜೀವಗಾಂಧಿ ಹಾಗೂ ಇಂದಿರಾ ಅವಾಸ ವಸತಿ ಯೋಜನೆಯಡಿಯ ಫಲಾನುಭವಿಗಳಿಗೆ ಅನುದಾನ ವಿತರಣೆಯಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ಗೆ ಮನವಿ ಸಲ್ಲಿಸಿರುವ ಗ್ರಾಮದ ಫಲಾನುಭವಿಗಳು, ಮಂತ್ರೋಡಿ ಗ್ರಾಪಂದಲ್ಲಿನ ಒಟ್ಟು 91 ವಸತಿ ಯೋಜನೆ ಫಲಾನುಭವಿಗಳಿದ್ದು, ಇದರಲ್ಲಿ ರೇಖಾ ಶಿಗ್ಗಾಂವಿ, ರೇಣವ್ವ ತಾವರಗೇರಿ, ಸಂಗವ್ವ ಹಿರೇಮಠ, ಲಕ್ಷ್ಮವ್ವ ಅರಗೋಳ, ಬೀಬಿಜಾನ ನದಾಫ್, ಫಾತೀಮಾ ಪರೀಟ ಹಾಗೂ ಸುಶೀಲಾ ತಳವಾರ ಎಂಬ 7 ಫಲಾನುಭವಿಗಳಿಗೆ ತಲಾ ರು. 50 ಸಾವಿರ ಮಾತ್ರ ಮಂಜೂರಾದರೆ, ಉಳಿದ ಎಲ್ಲ ಫಲಾನುಭವಿಗಳಿಗೆ ತಲಾ ರು. 75 ಸಾವಿರ ಅನುದಾನ ಮಂಜೂರುಗೊಳಿಸುವ ಮೂಲಕ ತಾರತಮ್ಯ ತೋರಿದ್ದಾರೆ.
ಈ ಬಗ್ಗೆ ಗ್ರಾಪಂ ಅಧಿಕಾರಿಗಳನ್ನು ವಿಚಾರಿಸಿದಾಗ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಆದ್ದರಿಂದ ಏಳು ಫಲಾನುಭವಿಗಳಿಗೆ ತಲಾ ರು. 25 ಸಾವಿರ ಮಂಜೂರು ಮಾಡಿಸಲು ಸೂಕ್ತ ಕ್ರಮಕೈಗೊಂಡು ಅಪೂರ್ಣಗೊಂಡ ವಸತಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಿಕೊಡುವಂತೆ ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.