ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಶಿಕ್ಷಣದಲ್ಲಿ ಮಾನವೀಯ ಮೌಲ್ಯ ಕುಸಿತ

Parashurama
Updated On : 11 Feb 2013, 12:27 pm

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 10
ಆಧುನಿಕ ಶಿಕ್ಷಣ ಪದ್ಧತಿಯಿಂದ ಸ್ಫರ್ಧೆಗಿಳಿದಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ದುರಂತವೆಂದು ರಾಣಿಬೆನ್ನೂರು ವಿವೇಕಾನಂದ ಆಶ್ರಮದ ಶ್ರೀ ಪ್ರಕಾಶಾನಂದಜೀ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಶಿಡೇನೂರಿನ ಡಾ. ಬಿ.ಆರ್. ಅಂಬೇಡ್ಕರ್ ಪದವಿಪೂರ್ವ ಕಾಲೇಜು ಹಾಗೂ ಫ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಸಾನ್ನಿದ್ಯ ವಹಿಸಿ ಮಾತನಾಡಿದರು.
ಸಂಸ್ಕೃತಿಯಿಂದ ವ್ಯಕ್ತಿತ್ವಕ್ಕೆ ಬೆಲೆ: ವಿಕಸನದ ಹಾದಿ ಹಿಡಿದಿರುವ ವ್ಯಕ್ತಿಗಳು ಶಿಕ್ಷಣಕ್ಕೆ ಮುಗಿಬೀಳುತ್ತಿದ್ದಾರೆ. ಇದರ ಆವಶ್ಯಕತೆ ಇದೆ ಎಂದು ಒಂದೆಡೆ ಒಪ್ಪಿಕೊಳ್ಳಬಹುದು. ಆದರೆ, ಎಲ್ಲವೂ ಅದರಿಂದಲೇ ಪಡೆದುಕೊಳ್ಳಬಹುದು ಎಂಬುದು ಸತ್ಯಕ್ಕೆ ದೂರವಾದ ವಿಷಯ ಮನುಷ್ಯ ಕೇವಲ ವಿದ್ಯಾವಂತನಾದರೆ ಸಾಲದು ಸುಸಂಸ್ಕೃತನಾಗಿ ಹೊರಹೊಮ್ಮಿದಾಗ ಮಾತ್ರ ಆತನ ವ್ಯಕ್ತಿತ್ವಕ್ಕೆ ಬೆಲೆ ಬರಲಿದೆ ಎಂದರು.
ಘಟನೆಯಿಂದ ಕಹಿ ನೆನಪು: ದೆಹಲಿ ಗ್ಯಾಂಗ್‌ರೇಪ್, ಮಂಗಳೂರು ವಿದ್ಯಾರ್ಥಿನಿ ಅಫೀಮು ಸೇವನೆಗೆ ಹಣ ಸಿಗದೇ ಆತ್ಮಹತ್ಯೆ, ಅಮೇರಿಕದ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿ ಸುಮಾರು 22 ಮಕ್ಕಳು ಸಾವಿಗೀಡಾದ ಕಹಿ ಘಟನೆಗಳು ಮುಂದಿನ ಪೀಳಿಗೆಗೆ ಯಾವ ಸಂದೇಶ ಹೊತ್ತೊಯ್ಯಲಿವೆ ಎಂದು ಪ್ರಶ್ನಿಸಿದರು.
ಯುವಕರಿಂದ ಸಮಾಜಮುಖಿ ಕಾರ್ಯ: ಯುವಕನೊಬ್ಬ ಸಮಾಜಮುಖಿ ಶಿಕ್ಷಣ ಪಡೆದಲ್ಲಿ ಇಡೀ ಸಮಾಜವನ್ನೇ ಸರಿದಾರಿ ನಡೆಯುವಂತೆ ಮಾಡಬಲ್ಲ ಶಕ್ತಿ ಆತನಲ್ಲಿಡಗಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಹಾಗೂ ನೈತಿಕ ನೆಲೆಗಟ್ಟಿನ ಶಿಕ್ಷಣ ಆವಶ್ಯಕತೆ ಪ್ರಸ್ತುತ ಸಮಾಜಕ್ಕಿದೆ ಎಂದು ಪ್ರತಿಪಾದಿಸಿದರು.
ಶಿಕ್ಷಣದಿಂದ ಯಶಸ್ಸು: ಅಧ್ಯಕ್ಷತೆ ವಹಿಸಿದ್ದ ಹಾವೇರಿ ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ವಿದ್ಯಾರ್ಥಿಗಳು ಉದಾತ್ತ ಗುರಿಯೊಂದಿಗೆ ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದಲ್ಲಿ ತೊಡಗಿದಾಗ ಮಾತ್ರ ಶಿಕ್ಷಣದಲ್ಲಿ ಯಶಸ್ಸು ಗಳಿಸಲು ಸಾಧ್ಯವೆಂದರು.
ಇತ್ತೀಚಿನ ಸ್ಪರ್ಧಾತ್ಮಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕು. ಅಂದಾಗ ಮಾತ್ರ ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಎದುರಿಸಲು ಸಾಧ್ಯವೆಂದರು.
ವಿಷಯ ಜ್ಞಾನ ಪಡೆಯುವುದರಿಂದ ವ್ಯಕ್ತಿ ಹಾಗೂ ಸಮಾಜ ಬದಲಾವಣೆಗೊಳ್ಳಲು ಸಾಧ್ಯವಿಲ್ಲ. ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದ್ದು, ಸ್ವಾಮಿ ವಿವೇಕಾನಂದರ ತತ್ವಾದರ್ಶ ಹಾಗೂ ದೇಶಪ್ರೇಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯಗಳಲ್ಲಿ ಒಂದು. ಈ ದಿಶೆಯಲ್ಲಿ ಶಿಕ್ಷಕರು, ಪಾಲಕರು ಚಿಂತಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಕೊಪ್ಪದ, ಸದಸ್ಯರಾದ ಫಕ್ಕೀರಪ್ಪ ದಾನಪ್ಪನವರ, ರುದ್ರಪ್ಪ ಕುಬಟೂರು, ಪ್ರಾಚಾರ್ಯ ಲಿಂಗಯ್ಯ, ಎಸ್.ಎನ್. ಯಮನಕ್ಕನವರ, ಬಿ.ಎನ್. ಹಾಲೇಶಪ್ಪನವರ, ನಾಗಪ್ಪ ಹೊಸೂರು, ಅಶೋಕ ಎರಿಮನಿ, ಮುಖ್ಯಶಿಕ್ಷಕ ಶಿವ್ಯಾನಾಯ್ಕ, ನಿಂಗಪ್ಪ ಲಮಾಣಿ, ಶೋಭಾ ಮುನಿಗೋಳ, ಅಂಗಡಿ, ಉಪಸ್ಥಿತರಿದ್ದರು. ವಿಶಾಲಾ ಕೊಪ್ಪದಮಠ ಸ್ವಾಗತಿಸಿದರು. ರೇಖಾ ಮ್ಯಾಗೇರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments