ಅಪಘಾತ: ಸವಾರನಿಗೆ ಗಾಯ
ಹಾವೇರಿ: ರಾಂಗ್ ಸೈಡ್ನಲ್ಲಿ ಅತಿವೇಗದಿಂದ ಬೈಕ್ ಚಾಲನೆ ಮಾಡಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್ಗೆ ಡಿಕ್ಕಿ ಹೊಡೆಸಿದ ಪರಿಣಾಮ ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಹಿರೇಕೆರೂರು ಪಟ್ಟಣದಲ್ಲಿ ಜರುಗಿದೆ. ಗಾಯಾಳುವನ್ನು ಬಸವರಾಜ ಕುರಿ ಎಂದು ಗುರುತಿಸಲಾಗಿದೆ. ಬೈಕ್ ಸವಾರ ಜಿಯಾವುಲ್ಲಾ ಖಲಂದರಸಾಬ ಪಟೇಲ್ ವಿರುದ್ಧ ನಾಗರಾಜ ಬೀರಪ್ಪ ದೊಡ್ಡಅಣಜಿ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಪಘಾತ: 6 ಜನಕ್ಕೆ ಗಾಯ
ಹಾವೇರಿ: ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಓಮ್ನಿಗೆ ಡಿಕ್ಕಿ ಹೊಡೆದ ಕಾರು ಚಾಲಕ ಉರುಳಿದ ಓಮ್ನಿಯೊಳಗಿದ್ದ ಆರು ಜನರು ಗಾಯಗೊಂಡಿರುವುದನ್ನು ಕಂಡು ಕಾರು ಸಮೇತ ಪರಾರಿಯಾದ ಘಟನೆ ರಾಣಿಬೆನ್ನೂರು ತಾಲೂಕಿನ ಕರೂರ ಕ್ರಾಸ್ನಲ್ಲಿ ಜರುಗಿದೆ. ಈ ಘಟನೆಯಲ್ಲಿ ಗುರುಮೂರ್ತಿ (28) ಸೇರಿ ಒಟ್ಟು ಆರು ಜನರು ಗಾಯಗೊಂಡಿದ್ದು, ಕಾರು ಡಿಕ್ಕಿ ಹೊಡೆಸಿದ ಸಂಜಯ ಹರಿಬಾವು ಧೋತ್ರೆ ವಿರುದ್ಧ ಗುರುಮೂರ್ತಿ ಅವರು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಜೂಜಾಡುತ್ತಿದ್ದ 7 ಜನ ಸೆರೆ
ಹಾವೇರಿ: ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು 7 ಜನರನ್ನು ಬಂಧಿಸಿ ರು. 145 ನಗದನ್ನು ವಶಪಡಿಸಿಕೊಂಡ ಘಟನೆ ಹಿರೇಕೆರೂರು ತಾಲೂಕಿನ ಮೇದೂರು ಗ್ರಾಮದಲ್ಲಿ ಜರುಗಿದೆ. ನವೀನ ಚಂದ್ರಪ್ಪ ಅಂಗಡಿ ಸೇರಿ ಒಟ್ಟು ಏಳು ಜನರನ್ನು ಬಂಧಿಸಲಾಗಿದ್ದು, ದಾಳಿಯ ನೇತೃತ್ವವನ್ನು ರಟ್ಟೀಹಳ್ಳಿ ಪಿಎಸ್ಐ ಶಿಲ್ಪಾ ವಹಿಸಿದ್ದರು. ಪ್ರಕರಣ ದಾಖಲಾಗಿದೆ.
ಕ್ಷಯದಿಂದ ಬೇಸತ್ತು ನಾಪತ್ತೆ
ಹಾವೇರಿ: ಬಹುವರ್ಷದಿಂದ ಅಂಟಿಕೊಂಡಿದ್ದ ಕ್ಷಯ ರೋಗದಿಂದ ಬೇಸತ್ತ ವ್ಯಕ್ತಿಯೋರ್ವ ಮನೆ ತೊರೆದು ಹೋದ ಘಟನೆ ರಾಣಿಬೆನ್ನೂರು ನಗರದಲ್ಲಿ ಜರುಗಿದೆ. ರಾಣಿಬೆನ್ನೂರ ಶಹರದ ಸಿದ್ದೇಶ್ವರ ನಗರದ ಧರ್ಮಣ್ಣ ತಿಮ್ಮಪ್ಪ ಕಾಮಣ್ಣನವರ ಕಾಣೆಯಾಗಿರುವ ಕುರಿತು ಈತನ ಪತ್ನಿ ರತ್ನಮ್ಮ ರಾಣಿಬೆನ್ನೂರು ಶಹರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ವಿವಾಹಿತೆ ಕಾಣೆ: ದೂರು
ಹಾವೇರಿ: ಮನೆಯಿಂದ ಸಕಾರಣವಿಲ್ಲದೆ ಹೊರಹೋದ ವಿವಾಹಿತೆಯೊಬ್ಬಳು ತಿರುಗಿ ಬಾರದೆ ಕಾಣೆಯಾದ ಘಟನೆ ರಾಣಿಬೆನ್ನೂರು ತಾಲೂಕಿನ ಮಾಧವರಾಯನಹಳ್ಳಿಯಲ್ಲಿ ಜರುಗಿದೆ. ಕಾಣೆಯಾದ ಯುವತಿಯನ್ನು ಶೃತಿ ರಾಜು ವಡ್ಡರ (19) ಎಂದು ಗುರುತಿಸಲಾಗಿದೆ. ಈ ಬಗ್ಗೆ ಆಕೆಯ ಪತಿ ರಾಜು ಕೃಷ್ಣಪ್ಪ ವಡ್ಡರ ರಾಣಿಬೆನ್ನೂರು ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನಾಳೆ ದಶಮಾನೋತ್ಸವ
ಸವಣೂರು: ಕಾಗಿನೆಲೆ ಕನಕಪೀಠದ ಹೊಸದುರ್ಗ ಶಾಖಾ ಮಠದ ದಶಮಾನೋತ್ಸವ ಸಮಾರಂಭ, ಮಹಾಲಕ್ಷ್ಮಿ ದೇವಿಯ ನೂತನ ದೇವಾಲಯ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕವನ್ನು ಫೆ. 13ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.