ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಟಿಸಿಜಿ ಪ್ರತಿನಿಧಿಗಳಿಗೆ ಆರೋಗ್ಯ, ಶಿಕ್ಷಣ ತರಬೇತಿ

Parashurama
Updated On : 12 Feb 2013, 11:44 am

ಹಾವೇರಿ: ಹಾವೇರಿ ನಗರಸಭೆಯ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯಲ್ಲಿ 2012-13ನೇ ಸಾಲಿನಲ್ಲಿ ಯುಸಿಡಿಎನ್ ಘಟಕದಲ್ಲಿ ಟಿಸಿಜಿ ಗುಂಪಿನ ಪ್ರತಿನಿಧಿಗಳಿಗೆ ಪುಸ್ತಕ ರೈಟರ್ಸ್ ಶಿಬಿರ, ಆರೋಗ್ಯ ನೈರ್ಮಲ್ಯ ಮತ್ತು ಶಿಕ್ಷಣ ಕುರಿತು ತರಬೇತಿ ಶಿಬಿರವನ್ನು ನಗರಸಭಾ ಅಧ್ಯಕ್ಷ ಜಗದೀಶ ಮಲಗೋಡ ಇತ್ತೀಚೆಗೆ ಉದ್ಘಾಟಿಸಿದರು.
ನಗರಸಭೆ ಎಸ್‌ಜೆಎಸ್‌ಆರ್‌ವೈ ಯೋಜನೆಯಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯವಿದ್ದು, ಬ್ಯಾಂಕಿನಿಂದ ಮಂಜೂರಾದ ಸಾಲಕ್ಕೆ ಸಹಾಯಧನ ವಿತರಿಸಲಾಗುತ್ತದೆ. ನಗರಸಭೆಯ ವತಿಯಿಂದ ರಚನೆಗೊಂಡ ಟಿಸಿಜಿ ಗುಂಪುಗಳಿಗೆ ರು. 20 ಸಾವಿರ ಸುತ್ತುನಿಧಿಯನ್ನು ನೀಡಲಾಗುತ್ತಿದೆ ಎಂದರು. ಉಪಾಧ್ಯಕ್ಷೆ ಲಲಿತಾ ಗುಂಡೇನಹಳ್ಳಿ ಮಾತನಾಡಿ, ಸ್ಟೆಪ್-ಅಪ್ ತರಬೇತಿ ಘಟಕದಲ್ಲಿ ವಿವಿಧ ಕೌಶಲ್ಯ ತರಬೇತಿಗಳನ್ನು ನಗರಸಭೆಯಿಂದ ಉಚಿತವಾಗಿ ನೀಡಲಾಗುತ್ತಿದೆ. ನಿರುದ್ಯೋಗಿಗಳು ಸೌಲಭ್ಯ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.
ಮೂರು ದಿನಗಳ ತರಬೇತಿ ಶಿಬಿರದಲ್ಲಿ 235 ಟಿಸಿಜಿ ಗುಂಪಿನ ಸದಸ್ಯರು ತರಬೇತಿ ಪಡೆದುಕೊಂಡರು. ಶಿಬಿರದಲ್ಲಿ ಡಾ೤ ಗುಹೇಶ್ವರ ಪಾಟೀಲ ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಸ್ತ್ರೀ ಆರೋಗ್ಯ ಕುರಿತಂತೆ ಉಪನ್ಯಾಸ ನೀಡಿದರು. ಸದಸ್ಯ ಮೋಮಿನಗಾರ, ಪೌರಾಯುಕ್ತ ಎಚ್.ಕೆ ರುದ್ರಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹನುಮಂತಪ್ಪ ಹಾಗೂ ನಟರಾಜ ಗೌಡ, ಸಿಡಿಎಸ್ ಅಧ್ಯಕ್ಷೆ ಗೌರಮ್ಮ ಕುಲಕರ್ಣಿ ಉಪಸ್ಥಿತರಿದ್ದರು. ಶೋಭಾ ಉದಗಟ್ಟಿ ನಿರ್ವಹಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments