ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ಸೇವೆ ಶ್ಲಾಘನೀಯ
ಹಾವೇರಿ: ಭಾರತದ ಪ್ರಾಚೀನ ಹಾಗೂ ಭವ್ಯ ಪರಂಪರೆಯ ಭರತ ನಾಟ್ಯ ಅನಿವಾರ್ಯ ಕಾರಣಗಳಿಂದಾಗಿ ಕಳೆಗುಂದಿ ಮಾಯವಾಗುವ ಸ್ಥಿತಿಗೆ ಬಂದಾಗ ಅದನ್ನು ಮತ್ತೆ ಮೇಲೆತ್ತಿ ಸುಸ್ಥಿಗೆ ತರುವ ಕಠಿಣ ಸಾಧ್ಯ ಪ್ರಯತ್ನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೆಲವೇ ಅಪರೂಪದ ಕಲಾಸಂಸ್ಥೆಗಳಲ್ಲಿ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ಪ್ರಮುಖವಾಗಿದೆ ಎಂದು ಗೌರಿಮಠದ ಶಿವಯೋಗಿ ಶ್ರೀಗಳು ಅಭಿಪ್ರಾಯಪಟ್ಟರು.
ಇಲ್ಲಿನ ಗೆಳೆಯರ ಬಳಗದ ಕಲಾಭವನದಲ್ಲಿ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಮೇಜರ್ ಬಿ.ಎನ್. ಮಳಿಗಿ ಮಾತನಾಡಿ, ಭರತನಾಟ್ಯ ಕಲಾಪ್ರಕಾರ ಆದಿಯಿಂದ ಇಂದಿನವರೆಗೆ ನಡೆದು ಬಂದ ದಾರಿಯ ಪರಿಚಯ ನೀಡುತ್ತಾ ಇದರ ಉಳಿವು, ಏಳ್ಗೆಗೆ ಛಲದ ಸೆಲೆ ಆಗಿ ಶ್ರಮಿಸುವ ಆಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಿ, ನಮ್ಮ ಪ್ರಾಚೀನ ಕಲೆಯೊಂದನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಪೂಜಾ ನೃತ್ಯದಿಂದ ಆರಂಭವಾದ ನೃತ್ಯ ಪ್ರದರ್ಶನದಲ್ಲಿ ವಿನುತ ರಾಘವೇಂದ್ರ, ಇವರ ವರ್ಣಂ ಸರ್ವರ ಮನೆ ಸೆಳೆಯಿತು. ಪುಣ್ಯಕೋಟಿ ರೂಪಕದಲ್ಲಿ ಹುಲಿ, ಕರು ಪಾತ್ರಗಳ ಜತೆಗೆ ವಿನುತಾರ ಗೋಪಿನ ಪಾತ್ರಗಳು ಎಲ್ಲರ ಮನವನ್ನು ಸೂರೆಗೊಂಡವು.
ವಿದುಷಿ ಸಹನಾ ಭಟ್, ಪ್ರದೀಪ ಭಟ್, ವಿನುತಾ ರಾಘವೇಂದ್ರ ಹೆಗಡೆ, ಇನ್ನಿತರರು ಉಪಸ್ಥಿತರಿದ್ದರು. ರಾಘವೇಂದ್ರ ಹೆಗಡೆ ನಿರ್ವಹಿಸಿದರು. ಶಿವಯೋಗಿ ಬಣಕಾರ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.