ಇಂದಿನಿಂದ ಖೋ-ಖೋ ಪಂದ್ಯಾವಳಿ
ಹಿರೇಕೆರೂರು: ಕವಿವಿ ಹಾಗೂ ತಾಲೂಕಿನ ರಟ್ಟಿಹಳ್ಳಿ ಪ್ರಿಯದರ್ಶಿನಿ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ 16 ಹಾಗೂ 17ರಂದು ಅಂತರ್ ಕಾಲೇಜುಗಳ ಪುರುಷರ ಏಕವಲಯ ಖೋ-ಖೋ ಪಂದ್ಯಾವಳಿ ರಟ್ಟಿಹಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗಲಿವೆ. 16ರಂದು ಬೆಳಗ್ಗೆ 10.30ಕ್ಕೆ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಸಾಲಿ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಪಂದ್ಯಾವಳಿ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಎಸ್.ಎಸ್. ಚೆನ್ನಗೌಡರ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ಸಾವಜ್ಜಿಯವರ, ಮರಾಠ ಸಮಾಜದ ಅಧ್ಯಕ್ಷ ವೈ.ಎಲ್. ಬಾಜಿರಾಯರ, ಹೊಯ್ಸಳ ಕ್ರೀಡಾ ಕ್ಲಬ್ ಅಧ್ಯಕ್ಷ ಚಂದ್ರಶೇಖರ, ಜಾಡರ, ಎಸ್ಡಿಎಂಸಿ ಅಧ್ಯಕ್ಷ ಪ್ರಕಾಶ ಸುಣಗಾರ, ನಿವೃತ್ತ ಉಪನ್ಯಾಸಕ ಎಂ.ಎಚ್. ಹರವಿಶೆಟ್ಟರ ಪಾಲ್ಗೊಳ್ಳುವರು.