ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಲಹ: ಓರ್ವ ಸಾವು (ಸುದ್ದಿ ಸಂಕ್ಷೇಪ)

Mainashree
Updated On : 16 Feb 2013, 10:22 am

ಹಾವೇರಿ: ದಾಯಾದಿ ಕಲಹವೊಂದು ವಿಕೋಪಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡು ಸಹೋದರನೋರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಶಿಗ್ಗಾಂವಿ ತಾಲೂಕು ಮಾಸನಕಟ್ಟಿ ಗ್ರಾಮದಲ್ಲಿ ಜರುಗಿದೆ. ಮೃತನನ್ನು ದಾದಾಪೀರ ರಹೀಮಾನಸಾಬ್ ಒಂಟಿ (35) ಎಂದು ಗುರುತಿಸಲಾಗಿದೆ. ಕುಟುಂಬ ಕಲಹ ವಿಕೋಪಕ್ಕೆ ಹೋದಾಗ ಬಸೋಬಿ, ಖುತೇಜಾಬಿ ಹಾಗೂ ಕುಟುಂಬ ವರ್ಗದ ಜಗಳ ಬಿಡಿಸಲು ಹೋದ ದಾದಾಫೀರನನ್ನು ಅದೇ ಕುಟುಂಬದವರು ಹಿಗ್ಗಾಮುಗ್ಗಾ ಥಳಿಸಿದ್ದರು. ಇದರಿಂದ ತೀವ್ರ ಗಾಯಗೊಂಡಿದ್ದ ದಾದಾಪೀರನನ್ನು ಶಿಗ್ಗಾಂವಿ ಸರ್ಕಾರ ಆಸ್ಪತ್ರೆಯಲ್ಲಿ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ದಾದಾಫೀರ ಗುರುವಾರ ಅಸುನೀಗಿದ್ದಾನೆ. ಬಸೋಬಿ ವಲಿಮಹಮ್ಮದ್ ಲಕ್ಷ್ಮೇಶ್ವರ, ಖುತೆಜಾಬಿ ಮಹಮ್ಮದ್ ಹನೀಫ್ ದಾರುಬಾಯಿ, ಶಫೀ ವಲಿಮಹಮ್ಮದ ಲಕ್ಷ್ಮೇಶ್ವರ, ಮಹಮ್ಮದ್ ರಫೀಕ ವಲಿಮಹಮ್ಮದ್ ಲಕ್ಷ್ಮೇಶ್ವರ, ಮಹಮ್ಮದ್ ಅಲಿ ವಲಿಮಹಮ್ಮದ್ ಲಕ್ಷ್ಮೇಶ್ವರ, ಖಾಸಿಂಸಾಬ ವಲಿಮಹಮ್ಮದ್ ಲಕ್ಷ್ಮೇಶ್ವರ, ಸಮೀನ್ ಮಹಮ್ಮದ್ ರಫೀಕ್ ಅವರ ಮೇಲೆ ನನ್ನೆಸಾಬ ವಲಿಮಹಮ್ಮದ್ ಲಕ್ಷ್ಮೇಶ್ವರ ದೂರು ನೀಡಿದ್ದು, ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಆಟೋ ಪಲ್ಟಿ: ಗಾಯ
ಹಾವೇರಿ: ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಆಟೋ ಚಾಲನೆ ಮಾಡಿ ರಸ್ತೆ ಬದಿಯಲ್ಲಿದ್ದ ವ್ಯಕ್ತಿಗೆ ಡಿಕ್ಕಿಪಡಿಸಿ ಆಟೋ ಉರುಳಿಬಿದ್ದ ಪರಿಣಾಮ ಮೂವರು ಗಾಯಗೊಂಡ ಘಟನೆ ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಬಳಿ ಜರುಗಿದೆ. ಈ ಕುರಿತಂತೆ ನಾಗರಾಜ ಕರಬಸಪ್ಪ ಕಳಸದ ವಿರುದ್ಧ ಕೋಟೆಪ್ಪ ಕರಿಯಪ್ಪ ಮಡಿವಾಳರ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಯುವಕ ಕಾಣೆ
ಹಾವೇರಿ: ಜಾತ್ರೆಗೆ ಸಂಬಂಧಿಕರನ್ನು ಕರೆಯಲೆಂದು ಹೋದ ಯುವಕನೋರ್ವ ತಿರುಗಿ ಮನೆಗೆ ಬಾರದೇ ನಾಪತ್ತೆಯಾದ ಘಟನೆ ಹಿರೇಕೆರೂರು ತಾಲೂಕು ಮಾಸೂರು ಗ್ರಾಮದಲ್ಲಿ ಜರುಗಿದೆ. ಕಾಣೆಯಾದವನನ್ನು ಅವಿನಾಶ ಹುಚ್ಚಪ್ಪ ಶೆಟ್ಟೆಪ್ಪನವರ(24) ಎಂದು ಗುರುತಿಸಲಾಗಿದೆ. ತಂದೆ ಹುಚ್ಚಪ್ಪ ಶೆಟ್ಟೆಪ್ಪನವರ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement