ವಂಚಕ ಸೆರೆ, ಓರ್ವ ಪರಾರಿ
ಹಾವೇರಿ: ಏರ್ಟೆಲ್ ಸಿಮ್ ಬಳಸಿ ಮೊಬೈಲ್ ಹಾಗೂ ಇಂಟರ್ನೆಟ್ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಗೆ ರು. 25.50 ಲಕ್ಷ ಹಣ ಬಂದಿರುವುದಾಗಿ ನಂಬಿಸಿ, ಹಣ ತಲುಪಿಸಲು ಇಂತಿಷ್ಟು ಟ್ಯಾಕ್ಸ್ ಪಾವತಿಸುವಂತೆ ಹೇಳಿ ಮೋಸ ಮಾಡುತ್ತಿದ್ದ ವ್ಯಕ್ತಿಯೋರ್ವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬ ಪರಾರಿಯಾಗಿದ್ದಾನೆ.
ಈ ಘಟನೆ ಹಾವೇರಿಯಲ್ಲಿ ನಡೆದಿದೆ. ಬಂಧಿತನನ್ನು ಒರಿಸ್ಸಾ ಮೂಲದ ಪ್ರದೀಪಕುಮಾರ ರಬೀಂದ್ರನಾಥ ಸ್ವಾಯನ್ (27) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ನಬಿ ಅಲಿಯಾಸ್ ಗುಲಾಬ್ ನಬಿ ಹಲವು ಬ್ಯಾಂಕ್ಗಳ ಎಟಿಎಂ ಕಾರ್ಡ್ಗಳು ಹಾಗೂ ರು. 90,500 ನಗದಿನೊಂದಿಗೆ ಪರಾರಿಯಾಗಿದ್ದಾನೆ.
ಮತ್ತೊಬ್ಬರಿಗೆ ತಿಳಿಸಿದರೆ ಅಥವಾ ಚರ್ಚಿಸಿದರೆ ಇಂಟರ್ನೆಟ್ ಮೂಲಕ ಹಣ ಬರುವುದನ್ನು ತಪ್ಪಿಸಬಹುದು ಎಂದು ಹೆದರಿಸಿ ಇವರು ಜನರನ್ನು ನಂಬಿಸುತ್ತಿದ್ದರು. ಬ್ಯಾಂಕ್ ಖಾತೆಗೆ ಹಣ ಭರಿಸಿಕೊಂಡು, ವಿವಿಧ ಹೆಸರಿನ ಖಾತೆಗಳ ಎಟಿಎಂ ಬಳಸಿ ಅದನ್ನು ಡ್ರಾ ಮಾಡುತ್ತಿದ್ದರು.
ಇದಕ್ಕೆ ಸಾಕ್ಷಿಯಾಗಿ ಸಿಮ್, ಎಟಿಎಂ ಕಾರ್ಡ್ಗಳು ಪೊಲೀಸರಿಗೆ ಸಿಕ್ಕಿವೆ.
ತನಿಖಾ ತಂಡದಲ್ಲಿದ್ದ ಸಿಪಿಐ ಎಂ.ಜಿ. ಪಂಪಾಪತಿ, ಪಿಎಸ್ಐ ಡಿ.ಬಿ. ಪಾಟೀಲ, ಬಿ.ಕೆ. ಗಣಪತಿ ಮತ್ತು ಸಿಬ್ಬಂದಿಗೆ ಎಸ್ಪಿ ಚೇತನಸಿಂಗ್ ರಾಥೋರ್ ಬಹುಮಾನ ಘೋಷಿಸಿದ್ದಾರೆ.