ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವೈದ್ಯ ಸೇವೆಗೆ ಆಗ್ರಹಿಸಿ ಆಸ್ಪತ್ರೆಗೆ ಮುತ್ತಿಗೆ

Mainashree
Updated On : 16 Feb 2013, 10:21 am

ರಾಣಿಬೆನ್ನೂರು: ತಾಲೂಕಿನ ಹಲಗೇರಿ ಗ್ರಾಮದ ತುಮ್ಮಿನಕಟ್ಟಿ ರಸ್ತೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರಂತರ ವೈದ್ಯಕೀಯ ಸೇವೆಗೆ ಆಗ್ರಹಿಸಿ ಸ್ವಾಭಿಮಾನಿ ಕರವೇ ತಾಲೂಕು ಘಟಕ ಹಾಗೂ ಹಲಗೇರಿ ಗ್ರಾಮ ಘಟಕಗಳ ಕಾರ್ಯಕರ್ತರು ಶುಕ್ರವಾರ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಸಿಬ್ಬಂದಿ ಕೊರತೆಯಿಂದ ಸಮಸ್ಯೆ: ಪ್ರತಿಭಟನೆ ನೇತೃತ್ವ ವಹಿಸಿದ್ದ ಹಲಗೇರಿ ಗ್ರಾಮ ಘಟಕದ ಅಧ್ಯಕ್ಷ ಕೊಟ್ರೇಶ ಮೊಟಗಿ ಮಾತನಾಡಿ, ತಾಲೂಕು ಕೇಂದ್ರದಿಂದ 10ಕಿ.ಮೀ ಅಂತರದಲ್ಲಿರುವ ಹಾಗೂ ಸುಮಾರು 12ಸಾವಿರ ಜನಸಂಖ್ಯೆ ಹೊಂದಿರುವ ಹಲಗೇರಿ ಗ್ರಾಮ ಮತ್ತು ಸುತ್ತಲಿನ ಗ್ರಾಮಗಳಾದ ಅಂತರವಳ್ಳಿ, ನಿಟ್ಟೂರು, ಲಿಂಗದಹಳ್ಳಿ, ಹೆಡಿಯಾಲ, ಕೊಣನತಂಬಿಗೆ, ಆಲದಕಟ್ಟಿ, ಹಾರೊಗೊಪ್ಪ ಇತರ ಸುಮಾರು 20 ಹಳ್ಳಿಗಳ ಜನತೆಗೆ ವೈದ್ಯಕೀಯ ಸೇವೆ ನೀಡಲು ಸ್ಥಳೀಯ ಸರ್ಕಾರಿ ಆಸ್ಪತ್ರೆ ಸ್ಥಾಪಿಸಲಾಗಿದೆ. ಇಲ್ಲಿ ವೈದ್ಯರು ಹಾಗೂ ಇತರೆ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದರು. ಪ್ರತಿಭಟನೆಯಲ್ಲಿ ಸ್ವಾಭಿಮಾನಿ ಕರವೇ ವಿಧ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಸಂಜೀವ ಕನವಳ್ಳಿ, ಹಿರೇಕೆರೂರು ತಾಲೂಕು ಸ್ವಾಕರವೇ ಅಧ್ಯಕ್ಷ ರವಿ ಮೂಲಿಮನಿ, ಪರಸಪ್ಪ ಶೆಟ್ಟೇರ, ಮಡಿವಾಳಪ್ಪ ಮಡಿವಾಳರ, ರಮೇಶ ಕನ್ನಪ್ಪಳವರ, ಗಣೇಶ ಮೂಟಗಿ, ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement