ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಾನಗಲ್ಲ ಗ್ರಾಮದೇವಿ ಜಾತ್ರಾ ಕಾರ್ಯಾಲಯ ಉದ್ಘಾಟನೆ

Mainashree
Updated On : 16 Feb 2013, 10:20 am

ಹಾನಗಲ್ಲ: ನಾಲ್ಕು ವರ್ಷಕ್ಕೊಮ್ಮೆ ಜರುಗುವ ಹಾನಗಲ್ಲ ಗ್ರಾಮದೇವಿ ಜಾತ್ರೆ ಈ ಬಾರಿ ಮಾ. 26ರಿಂದ ಏ. 4ರ ವರೆಗೆ ನಡೆಯಲಿದ್ದು, ಜಾತ್ರೆ ನಿಮಿತ್ತ ಪುರಸಭೆ ಆವರಣದಲ್ಲಿ ಜಾತ್ರೆ ಕಾರ್ಯಾಲಯಕ್ಕೆ ಮಾಜಿ ಸಚಿವ, ಜಾತ್ರಾ ಸಮಿತಿ ಅಧ್ಯಕ್ಷ ಸಿ.ಎಂ. ಉದಾಸಿ ಚಾಲನೆ ನೀಡಿದರು.
ಎಂಟು ದಿನಗಳ ಕಾಲ ನಡೆಯುವ ಹಾನಗಲ್ಲ ಗ್ರಾಮದೇವಿ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧ. ಮಾ. 26ರ ರಾತ್ರಿ ದೇವಸ್ಥಾನದ ಅಲಂಕೃತ ತೇರು ಎಳೆಯಲು ಆರಂಭಿಸಿದರೆ ಬೆಳಗಿನ ಜಾವದ ವರೆಗೂ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸುತ್ತದೆ. ಅನಂತರ ಪಾದಗಟ್ಟಿಗೆ ಮರಳುತ್ತದೆ.
ಜಾತ್ರೆಯನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ಸಮಿತಿ ರಚಿಸಲಾಗಿದೆ. ಗ್ರಾಮದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಕಾರ್ಯಾಲಯಕ್ಕೆ ಚಾಲನೆ ನೀಡಲಾಗಿದೆ. ಸಮಿತಿಯ ಉಪಾಧ್ಯಕ್ಷ ಎಂ.ಬಿ. ಕಲಾಲ, ಕಾರ್ಯದರ್ಶಿ ಎಸ್.ಎಚ್. ರಾಯ್ಕರ, ಖಜಾಂಚಿ ದುಶ್ಯಂತ ನಾಗರವಳ್ಳಿ, ಸದಸ್ಯರಾದ ಯಲ್ಲಪ್ಪ ಕಿತ್ತೂರ, ಬಿ.ಎಸ್.ಅಕ್ಕಿವಳ್ಳಿ, ರಾಮಣ್ಣ ಮಾಸನಕಟ್ಟಿ, ಕಲ್ಯಾಣಕುಮಾರ ಶೆಟ್ಟರ, ಎಂ.ಎಚ್. ಕಲಾಲ, ಎಚ್.ಎಸ್. ನಾಗಜ್ಜನವರ, ದೇವೆಂದ್ರಪ್ಪ ಮೂಡ್ಲಿ, ರಮೇಶ ಚಿನ್ನಮುಳಗುಂದ, ಬಲ್ಲಣ್ಣ ಬಂಕಾಪುರ, ನಾಗೇಂದ್ರ ತುಮರಿಕೊಪ್ಪ, ದಾವಲಾಜೆಪ್ಪ ಸಾತಪತಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement