ಕುಡಿವ ನೀರಿನ ಸಮಸ್ಯೆ ಬಗೆಹರಿಸಿ
ಶಿಗ್ಗಾಂವಿ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪುರಸಭೆಯವರು ಜನತೆಗೆ ನೀರು ಪೂರೈಸುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಕರವೇ ಉತ್ತರ ಕರ್ನಾಟಕ ಪದಾಧಿಕಾರಿಗಳು ಪ್ರತಿಭಟಿಸಿ, ಶಿರಸ್ತೇದಾರ ರತ್ನಾಕರವರಿಗೆ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ 15ರಿಂದ 20ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಇದರಿಂದ ದಿನನಿತ್ಯ ಮಹಿಳೆಯರಿಗೆ ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಬಿಟ್ಟು ನೀರಿಗಾಗಿ ಪರದಾಡಬೇಕಾಗಿದೆ. ಕುಡಿಯುವ ನೀರು 15ರಿಂದ 20 ದಿನಗಳವರೆಗೆ ಇಟ್ಟು ಕುಡಿಯಲು ಯೋಗ್ಯವಾಗಿಲ್ಲ. ಕ್ರೀಮಿ-ಕೀಟನಾಶಕ ನೀರಿನಲ್ಲಿ ಕಾಣಿಸಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಜನಸಾಮಾನ್ಯರ ಜೊತೆ ಪುರಸಭೆಯವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶೀಘ್ರ ಕೆರೆಗೆ ನೀರು ಹರಿಸಿ: ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಕುಡಿಯುವ ನೀರು ಪೂರೈಕೆಯಾಗಬೇಕು. ಕೂಡಲೇ ನಾಗನೂರು ಕೆರೆ ತುಂಬಿಸಿ ನೀರು ಪೂರೈಸಬೇಕು. ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆರೋಪಿಸಿದರು. ಈ ಸಂದರ್ಭ ಉಕರವೇ ರಾಜ್ಯಾಧ್ಯಕ್ಷ ಹನುಮಂತ ಬಂಡಿವಡ್ಡರ. ಕೆ.ಎಸ್. ಪಾಟೀಲ, ರವಿ ಕುರವತ್ತಿ, ಗಿರೀಶ ದೊಡ್ಡಮನಿ, ಶಂಕರ ಶಿವಳ್ಳಿ, ಶಿವು ಮರಾಠೆ, ದುರ್ಗಪ್ಪ ವಡ್ಡರ, ಲಕ್ಷ್ಮಣ ಬಂಡಿವಡ್ಡರ, ಕೃಷ್ಣ ಕುರುಬರ, ರವಿ ಬಾರ್ಕೇರ, ಲಕ್ಷ್ಮಣ ವನಹಳ್ಳಿ, ಈರಣ್ಣ ಅಂಗಡಿ, ಇನ್ನಿತರರು ಪಾಲ್ಗೊಂಡಿದ್ದರು.