ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ

Mainashree
Updated On : 18 Feb 2013, 10:24 am

ಹಾವೇರಿ: ರಾಜ್ಯದ ಬಿಜೆಪಿ ಸರ್ಕಾರ ಬಡವರ ವಿರೋಧಿ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಇಂಥ ಸರ್ಕಾರಕ್ಕೆ ಬರುವ ದಿನಗಳಲ್ಲಿ ಜನರೇ ಬುದ್ದಿ ಕಲಿಸಲಿದ್ದಾರೆ. ಅಲ್ಲದೇ ಅಂಗವಿಕಲರ, ವಿಧವೆಯರ ಹಾಗೂ ವೃದ್ದರ ಶಾಪ ತಟ್ಟಲಿದೆ ಎಂದು ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಕಿಡಿಕಾರಿದರು.
ತಾಲೂಕಿನ ಬಂಕಾಪುರದಲ್ಲಿ ಭಾನುವಾರ ಪುರಸಭೆಯ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನ್ಯಾಯಾಂಗ ಆದೇಶವನ್ನು ಪ್ರಸಕ್ತ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಇದರ ಹಿಂದೆಯೇ ಇದೀಗ ಪುರಸಭೆ ಚುನಾವಣೆಗಳು ಎದುರಾಗಿದ್ದು, ಬಿಜೆಪಿ ದುರಾಡಳಿತಕ್ಕೆ ಕೊನೆ ಸಿಕ್ಕಂತಾಗಿದೆ. ನೂರಾರು ಅವಕಾಶ ವಂಚಿತ ಅಭ್ಯರ್ಥಿಗಳು ಇಂದು ಕಾಂಗ್ರೆಸ್‌ಗೆ ಬೆಂಬಲಿಸುತ್ತಿರುವುದು ಬಿಜೆಪಿಯಲ್ಲಿ ತಳಮಳ ಉಂಟುಮಾಡಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣ ರಾಣೋಜಿ ಮಾತನಾಡಿ, ಪಕ್ಷ ಹಾಕಿಕೊಟ್ಟ ಸಿದ್ಧಾಂತಗಳಿಗೆ ಬದ್ಧವಾಗಿ ಪುರಸಭೆ ಅಧ್ಯಕ್ಷರಾಗಿ ಆಡಳಿತ ನಡೆಸಿದ ತೃಪ್ತಿ ಇದೆ. ಬರುವ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವ ಉದ್ದೇಶ ನಮ್ಮದಾಗಿದೆ ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೊಜಿ ಅಧ್ಯಕ್ಷತೆ ವಹಿಸಿದ್ದರು. ಬಂಕಾಪುರ ಪುರಸಭೆ ಮಾಜಿ ಅಧ್ಯಕ್ಷ ಮುನ್ನಾ ಗುಲ್ಮಿ, ಸತೀಶ ಆಲದಕಟ್ಟಿ, ಎ.ಸಿ. ಜಮಾದರ, ಜಿಪಂ ಮಾಜಿ ಉಪಾಧ್ಯಕ್ಷ ಎನ್.ಸಿ. ಪಾಟಿಲ, ಜಿಪಂ ಮಾಜಿ ಅಧ್ಯಕ್ಷ ಗುಡ್ಡಪ್ಪ ಜಲದಿ, ಯುವ ಕಾಂಗ್ರೆಸ್ ಅಧ್ಯಕ್ಷ  ಶಂಬು ಆಜೂರ, ಹನುಮರೆಡ್ಡಿ ನಡುವಿನಮನಿ, ಬಸವರಾಜ ಕೂಲಿ, ಅಬ್ದುಲ್ ರಜಾಕ ತಹಸೀಲ್ದಾರ, ಪುರಸಭೆ ಮಾಜಿ ಸದಸ್ಯರಾದ ರಾಮಕೃಷ್ಣ ರಾಯ್ಕರ, ಬಾಬಾ ತರೀನ, ಶಿಶುಪಾಲ ಟೋಪಣ್ಣವರ, ಲಲಿತಾ ಹಂಜಗಿ, ಗಂಗಾಧರ ಬಡ್ಡಿ, ಮಹದೇವಪ್ಪ ವಡ್ಡರ, ಬಿ.ಎಫ್. ಬಡ್ಡಿ, ನೀಲಪ್ಪ ಸಣ್ಣಕ್ಕಿ, ಪದ್ಮಾ, ಪ್ರದೀಪ ಇಬ್ರಾಹಿಂಪುರ, ಮಾದೇವ ಗಣಪ್ಪನವರ, ಸುದೀರ ಲಮಾಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement