ಕ್ಯಾನ್ಸರ್ ರೋಗಿಗಳಿಗೆ ರೋಟರಿ ಧನಸಹಾಯ
ಹಾವೇರಿ: ಸ್ಥಳೀಯ ರೋಟರಿ ಸಂಸ್ಥೆಯಿಂದ ಬಡ ಕ್ಯಾನ್ಸರ್ ರೋಗಿಗಳಿಗೆ ಧನ ಸಹಾಯದ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ರೋಟರಿ ಸಂಸ್ಥೆಯ ವಿಶೇಷ ಚಾರ್ಟರ್ ಡೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಮಾಜಿ ಸಂಸದ ಬಿ.ಎಂ. ಮೆಣಸಿನಕಾಯಿ ಸ್ಮರಣಾರ್ಥ ರವಿ ಮೆಣಸಿನಕಾಯಿ ನೆಲೋಗಲ್ಲ ಗ್ರಾಮದ ಸುವರ್ಣಾ ಪುಟ್ಟಪ್ಪ ರಿತ್ತಿ, ಸ್ಥಳೀಯ ಶಿವಲಿಂಗಮಗರದ ಲಲಿತವ್ವ ದೇವೆಂದ್ರಪ್ಪ ಬೆಟಗೇರಿ ಅವರಿಗೆ ಧನಸಹಾಯದ ಚೆಕ್ ವಿತರಿಸಿದರು. ಡಾ ಭೀಮಸೇನ ಕರ್ಜಗಿ, ಎಸ್.ವಿ. ಹಿರೇಗೌಡರ, ರೋಟರಿ-ಇನ್ನರ್ ವೀಲ್ ಸಂಸ್ಥೆಯ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ನಾಗರಿಕರು ಪಾಲ್ಗೊಂಡಿದ್ದರು.