ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಸ್ ತಂಗುದಾಣಕ್ಕೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 19 Feb 2013, 11:07 am

ಬ್ಯಾಡಗಿ: ಸರ್ಕಾರಿ ಪದವಿ ಕಾಲೇಜ್ ಬಳಿ ಬಸ್ ನಿಲ್ದಾಣ ನಿರ್ಮಾಣ, ಮತ್ತಿತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕ ಸದಸ್ಯರು ಸೋಮವಾರ ಪುರಸಭೆ ಎದುರು ಗಂಟೆಗೂ ಹೆಚ್ಚು ಕಾಲ ಹಠಾತ್ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಪೂಜಾರ ಮಾತನಾಡಿ, ಪಟ್ಟಣದ ಹೊರವಲಯ ಕಾಲೇಜು ನಿರ್ಮಿಸಲಾಗಿದೆ. ಬಸ್ ಹಿಡಿದು ಕಾಲೇಜಿಗೆ ಹೋಗಿ ಬರಬೇಕಾದ ವಿದ್ಯಾರ್ಥಿಗಳಿಗೆ ತಂಗುದಾಣವಿಲ್ಲದೆ ಮಳೆ, ಬಿಸಿಲಿನಿಂದ ರಕ್ಷಣೆ ಸಿಗದಂತಾಗಿದೆ. ಶಾಸಕರು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಹಾವಿದ್ಯಾಲಯಕ್ಕೆ ಸೌಕರ್ಯ ಕಲ್ಪಿಸಲು ನಿರಾಸಕ್ತಿ ತೋರಿದ್ದರಿಂದ ಕಾಲೇಜು ಇದ್ದೂ ಇಲ್ಲದಂತಾಗಿದೆ ಎಂದು ದೂರಿದರು.
ವಿಜಯಕುಮಾರ ಶಿಡ್ಲಣ್ಣನವರ ಮಾತನಾಡಿ, ಪುರಸಭೆಯ 22.75 ಯೋಜನೆಯಡಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಲ್ಯಾಪ್‌ಟಾಪ್ ಒದಗಿಸಬೇಕು. ಬಸ್‌ಪಾಸ್ ಸಲುವಾಗಿ ಹೆಚ್ಚುವರಿಯಾಗಿ ಪಡೆದಿದ್ದ ರು. 60ನ್ನು ವಿದ್ಯಾರ್ಥಿಗಳಿಗೆ ಮರಳಿಸಬೇಕೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement