ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಲೆಯಿಂದ ನೆಮ್ಮದಿ ಜೀವನ

Mainashree
Updated On : 21 Feb 2013, 10:32 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 20
ಕಲಾ ಸಂಪತ್ತು ಶ್ರೇಷ್ಠ ಹಾಗೂ ಪ್ರಕೃತಿ ಸಹಜವಾದದ್ದು, ನಮ್ಮೇಲ್ಲರ ಜೀವನದಲ್ಲಿ ಕಲೆ ರೂಢಿಸಿಕೊಂಡರೆ ಮಾನಸಿಕ ನೆಮ್ಮದಿ, ಸುಖಕರ ಜೀವನ ನಡೆಸಬಹುದೆಂದು ನಿವೃತ್ತ ಪ್ರಾಚಾರ್ಯ ಎಸ್.ವ್ಹಿ. ದೇಶಪಾಂಡೆ ಹೇಳಿದರು.
ಪಟ್ಟಣದ ಸುಜನಿ ನಾಟ್ಯ ಶಾಲೆ ಜೆಸಿಐ ಆಶ್ರಯಲ್ಲಿ ಎಸ್‌ಬಿಬಿಎಂಡಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಸುಜನಿ ನಾಟ್ಯ ಶಾಲೆಯ ವಾರ್ಷಿ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೇವಲ ದೃಶ್ಯ ಮಾದ್ಯಮದಲ್ಲಿ ನಾಟಕ ನೋಡಿ ಕಲಿಯುವುದು ಬೇಡ. ಗುರುಗಳ ನೇರವು ಪಡೆದು ಕಲಾ ಶ್ರೇಷ್ಟತೆ ಹೆಚ್ಚಿಸಬೇಕೆಂದರು. ಪುರಸಭೆ ಅಧ್ಯಕ್ಷ ರಾಮು ಪೂಜಾರ ಕಾರ್ಯಕ್ರಮ ಉಧ್ಘಾಟಿಸಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಜಿ. ಪಾಟೀಲ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯನಿಗೆ ಕೇವಲ ಮೂಲಭೂತ ಸೌಲಭ್ಯಗಳಿದ್ದರೆ ಸಾಲದು, ಅದಕ್ಕಿಂತ ಶ್ರೇಷ್ಠವಾದದ್ದು ನೆಮ್ಮದಿ. ನೆಮ್ಮದಿಯನ್ನು ನೃತ್ಯ ಸಂಗೀತಕಲೆಗಳು ನೀಡುತ್ತವೆ. ಒತ್ತಡದ ಮಧ್ಯೆ ಜೀವನ ನಡೆಸುತ್ತಿರುವ ನಮ್ಮೇಲ್ಲರಿಗೂ ಸಂಗೀತ ಸಂತೋಷ ನೀಡುವ ಮಾಧ್ಯಮವಾಗಿದೆ ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಕಲೆಗಳನ್ನು ಉಳಿಸಿ, ಬೆಳೆಸುವುದು ಮುಖ್ಯವಾಗಿದೆ ಎಂದರು.
ಸುಜನಿ ನಾಟ್ಯ ಶಾಲೆಯ ನೃತ್ಯ ನಿರ್ದೇಶಕಿ ವಿದೂಷಿ ಸುನಿತಾ ಜಗನ್ನಾತ್ ಪ್ರಾಸ್ತಾವಿಕ ಮಾತನಾಡಿ, ನಾಟ್ಯ ಶಾಲೆ ಬೆಳೆದು ಬಂದ ವರದಿ ವಾಚನ ಮಾಡಿದರು.
ಜೆಸಿಐ ಅಧ್ಯಕ್ಷ ಡಾ೤ ಜಿ.ಸಿ. ನಿಡಗುಂದಿ ಅಧ್ಯಕತೆ ವಹಿಸಿ ಮಾತನಾಡಿ, ಸಂಗೀತ ನೃತ್ಯ ದೇಶದ ಸಂಸ್ಕೃತಿ ಪ್ರತೀಕವಾಗಿದೆ. ಅವುಗಳಗನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದರು. ಈ ಸಂದರ್ಭ ಎಸ್‌ಬಿಬಿಎಂಡಿ ಕಾಲೇಜು ಉಪಪ್ರಾಚಾರ್ಯ ಜಿ.ಎನ್. ಯಲಿಗಾರ, ಡಾ೤ ಕುಮಾರ ಪಾಟೀಲ್, ಡಾ೤ ಲತಾ ನಿಡಗುಂದಿ, ಕಸಾಪ ಅಧ್ಯಕ್ಷ ಬಸವರಾಜ ಬಸರಿಕಟ್ಟಿ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಜೆ.ಸಿ. ಸುದರ್ಶನಿ ಪಾಟೀಲ್, ಗೀತಾ ದೇಶಪಾಂಡೆ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ನೀಲಗುಂದ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement