ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗ ಶ್ರೇಯೋಭಿವೃದ್ಧಿ

Mainashree
Updated On : 21 Feb 2013, 10:32 am

ಹಾನಗಲ್ಲ:  ಹಾನಗಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜಿಲ್ಲಾಧ್ಯಕ್ಷ ಮನೋಹರ ತಹಸೀಲ್ದಾರ ನೇತೃತ್ವದಲ್ಲಿ ಜರುಗಿತು. ಪದಾಧಿಕಾರಿಗಳಿಗೆ ಪದಗ್ರಹಣ, ಪ್ರತಿಜ್ಞಾವಿಧಿ ಬೋಧಿಸಿದ ಮನೋಹರ ತಹಸೀಲ್ದಾರ ಮಾತನಾಡಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಮೊದಲಿನಿಂದಲೂ ಶ್ರಮಿಸುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜ್ಯದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಆಡಳಿತ ಅವಧಿಯಿಂದ ಹಿಂದುಳಿದ ಸಮಾಜ, ಅಲ್ಪಸಂಖ್ಯಾತರು, ಶೋಷಿತರು, ರೈತರು, ಬಡವರ ಏಳ್ಗೆಗಾಗಿ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿ ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆ ನಿರ್ಮಾಣ ಮಾಡುವಲ್ಲಿ ಕಾಂಗ್ರೆಸ್ ಮುಂದಾಗಿದೆ ಎಂದರು. ಪಕ್ಷದ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ. ಕಂಬಾಳಿಮಠ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಾನಗಲ್ಲ ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷ ಏಳುಕೋಟೆಪ್ಪ ಹಾವಳೇರ, ಅಕ್ಕಿಆಲೂರು ಬ್ಲಾಕ್ ಅಧ್ಯಕ್ಷ ಮಂಜು ಗೊರಣ್ಣನವರ ಮಾತನಾಡಿದರು. ಹಾನಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಎನ್.ಎಸ್. ಪಡೆಪ್ಪನವರ, ಎಸ್.ಎಸ್. ಹೆರೂರ, ಎಂ.ಆರ್. ಗುತ್ತಲ, ಚನ್ನಬಸಪ್ಪ ಶಿಗ್ಗಾಂವಿ, ಸುಭಾಸ ತಹಸೀಲ್ದಾರ, ಕೆ.ಎಲ್. ದೇಶಪಾಂಡೆ, ಕೇಶವ ಶೇಷಗಿರಿ, ಆರ್.ಎಸ್. ಪಾಟೀಲ, ವಿರೇಶ ಬೈಲವಾಳ, ಶಿವಣ್ಣ ಗೊಲ್ಲರ, ಅಭಿ ಪಾಟೀಲ, ಮಖಬೂಲಹ್ಮದ್ ಹುಲಗೂರ, ಪ್ರಭು ದೊಡ್ಡಕುರುಬರ, ವಿಜಯ ಅಂಗಡಿ, ಪುಟ್ಟಪ್ಪ ಬಳಿಗಾರ, ಚಂದ್ರಣ್ಣ ಜನಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement