ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾನೂನು ತಿಳುವಳಿಕೆಯಿಂದ ಸುವ್ಯವಸ್ಥೆ

Lingaraj Badiger
Updated On : 22 Feb 2013, 12:41 pm

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ.21
ಕಾನೂನು ತಿಳುವಳಿಕೆಯೊಂದಿದ್ದರೆ ಸಾರ್ವಜನಿಕರು ಶಾಂತಿ ಮತ್ತು ಸೌಹಾರ್ದ ಬದುಕು ಸಾಗಿಸಲು ಸಾಧ್ಯವೆಂದು ದಿವಾಣಿ (ಹಿರಿಯ ಶ್ರೇಣಿ) ನ್ಯಾಯಾಧೀಶ ಎಂ. ರಾಮಚಂದ್ರ ರಾಷ್ಟ್ರೀಯ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನ ಕುಂಟನಹೊಸಳ್ಳಿಯಲ್ಲಿ ಕಾನೂನು ಸಾಕ್ಷರ ಶಿಬಿರ ಹಾಗೂ ಕುಮಾರೇಶ್ವರ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕಗಳು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಕಿರಿಯ ನ್ಯಾಯಾಧೀಶ ಮದ್ವೇಶ ಡಬೇರ ಮಾತನಾಡಿ, ಉಚಿತ ಕಾನೂನು ಅರಿವು ನೆರವು ಕಾರ್‌ಯಕ್ರಮದಡಿಯಲ್ಲಿ ಸರ್ವರೂ ಸಲಹೆಗಳನ್ನು ಪಡೆಯಬೇಕೆಂದರು.
ಜನತಾ ಶಿಕ್ಷಣ ಸಹಕಾರಿ ಸೌಹಾರ್ದ ನಿದೇಶಕ ಡಾ. ವಿ.ಎಂ. ಕುಲಕರ್ಣಿ ಮಾತನಾಡಿ, ಶಿಬಿರಾರ್ಥಿಗಳಲ್ಲಿ ಬದುಕಿನ ಪ್ರಾಥಮಿಕ ಜ್ಞಾನದ ಅವಶ್ಯಕತೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆದಿಶಕ್ತಿ ಸೌಹಾರ್ದ ಸಹಕಾರಿ ಅಧ್ಯಕ್ಷ ಎಂ.ಬಿ. ಕಲಾಲ ಮಾತನಾಡಿ, ಮಾತು ಕೃತಿ ಮಧ್ಯದಲ್ಲಿ ವೈರುದ್ಧತೆ ಕಾಣುತ್ತೇವೆ. ವ್ಯಕ್ತಿಯ ಹೆಸರಿನಿಂದ ಅವಘಡಗಳು ಅನಿವಾರ್ಯವಾಗಿ ಸಂಭವಿಸುತ್ತವೆ ಎಂದು ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ನೀಡಿದರು.
ಹಿರಿಯ ನ್ಯಾ. ರವಿ ಒಡೆಯರ್, ಮಾಹಿತಿ ಹಕ್ಕು ಕಾಯ್ದೆ ಉಳಿದೆಲ್ಲ ಕಾನೂನುಗಳಿಗಿಂತ ಪರಿಣಾಮಕಾರಿ ಎಂದರು. ನ್ಯಾ. ಎಂ.ಎಸ್. ಹುಲ್ಲೂರ ಮೋಟರ ವಾಹನ ಕಾಯ್ದೆ ಕುರಿತು ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ. ಪ್ರಕಾಶ ಹೊಳೇರ ವರದಿ ನೀಡಿದರು. ಪ್ರಾಚಾರ್ಯ ಎನ್.ಬಿ. ಬಣಕಾರ, ಪ್ರೊ. ಸಿ. ಮಂಜುನಾಥ, ಮೂಕಣ್ಣ ಹೊಸಮನಿ, ಗದಿಗೆಪ್ಪ ಅರಳೇಶ್ವರ ಉಪಸ್ಥಿತರಿದ್ದರು. ಚೈತ್ರಾ ಕಾಗಿನೆಲ್ಲಿ ಪ್ರಾರ್ಥಿಸಿದರು. ಮಂಜುನಾಥ ಕಡೇರ, ಸಂಗಡಿಗರು ಎನ್‌ಎಸ್‌ಎಸ್ ಗೀತೆ ಹಾಡಿದರು. ನಮಿತಾ ಬಳ್ಳಾರಿ ಸ್ವಾಗತಿಸಿದರು. ದೀಪಾ ಬಂಕಾಪುರ ವಂದಿಸಿದರು. ದೀಪಿಕಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement