ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕರು ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 21
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿ. ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಗುರುವಾರ ಇಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ ರಸ್ತೆತಡೆ ನಡೆಸಿ. ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ದೇಶವ್ಯಾಪಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಹಾನಗಲ್ಲಿನಲ್ಲಿ ಕಾರ್ಮಿಕರು 2ನೇ ದಿನವೂ ಪ್ರತಿಭಟನೆ ಮುಂದುವರೆಸಿ ಮನವಿ ಸಲ್ಲಿಸಿದರು. ಮನವಿಯಲ್ಲಿ ಸಮಗ್ರ ಕಾರ್ಮಿಕ ಕಾನೂನು ಜಾರಿಗೆ ತರಬೇಕು, ದಂಡ ವಸೂಲಿ ನಿಲ್ಲಿಸಬೇಕು. ವೈಜ್ಞಾನಿಕ ಎವರೇಜ್ ನಿಗದಿ ಮಾಡಬೇಕು, ವಸತಿ ರಹಿತ ಬೀಡಿ ಕಾರ್ಮಿಕರಿಗೆ ಸಾಮೂಹಿಕವಾಗಿ ನಿವೇಶನ ನೀಡಬೇಕು, ಎಲ್ಲ ಬೀಡಿ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಸಿಐಟಿಯು ಸಂಚಾಲಕ ಎ.ಸಿ. ಚಿಕ್ಕಣ್ಣನವರ, ಕಾರ್ಯದರ್ಶಿ ರುಬಿಯಾಬಾನು ಅತ್ತಾರ, ಪದಾಧಿಕಾರಿಗಳಾದ ಶಬೀನಾಬಾನು ಮಾಸನಕಟ್ಟಿ, ಶಾಬೀರಾಬಿ ಉಪ್ಪಣಸಿ, ಶಹಜಾನಬಾನು ಶಿರಹಟ್ಟಿ, ತೈರಾಬಿ ಕಾರಡಗಿ, ಜರೀನಾಬಾನು ಮುಜಾವರ, ನಸರೀನಬಾನು ಘಾಳಪೂಜಿ, ಆಸ್ಮಾಬಾನು ಗಿರಸಿನಕೊಪ್ಪ, ಫಾಮಿದಾ ನಾಸೀಪುಡಿ, ಬಸೀರಾ ಅತ್ತಾರ, ಹಮಾಲ ಕಾರ್ಮಿಕ ಸಂಘದ ಮುಖಂಡರಾದ ನಜೀರಹ್ಮದ್ ಧಾರವಾಡ, ಮಖಬೂಲ ಅಹಮ್ಮದ್ ಮಾಸನಕಟ್ಟಿ, ಮಖಬೂಲ ಅಹ್ಮದ್ ಚಳ್ಳಿಹಾಳ, ಮರ್ದಾನಸಾಬ ಕೊಲ್ಲಾರಿ, ಅಲ್ಲಾವುದ್ದೀನ ರಾಣೀಬೆನ್ನೂರು, ಗುಡ್ಡಪ್ಪ ಕಾಳೆರ, ಮಖಬೂಲಅಹಮ್ಮದ್ ಕಾಳಂಗಿ, ಸಹದೇವಪ್ಪ ಕರಬಣ್ಣನವರ ಪಾಲ್ಗೊಂಡಿದ್ದರು.