ಮಸೀದಿಗಳಿಗೆ ರು. 13 ಲಕ್ಷ ಬಿಡುಗಡೆ: ಸಿ.ಎಂ. ಉದಾಸಿ
ಹಾನಗಲ್ಲ: ಹಾನಗಲ್ಲ ನಗರವನ್ನೊಳಗೊಂಡು ತಾಲೂಕಿನ ವಿವಿಧ ಗ್ರಾಮಗಳಲ್ಲಿನ 13 ಮಸೀದಿಗಳ ಜೀರ್ಣೋದ್ಧಾರಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರು. 13 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವಕ್ಫ ಸಂಸ್ಥೆಗಳ ಆಸ್ತಿ ರಕ್ಷಣೆಗಾಗಿ 2013ರ ಆಯವ್ಯಯದಲ್ಲಿ ಒಟ್ಟು ರು. 500 ಲಕ್ಷ ಅನುದಾನ ಒದಗಿಸಲಾಗಿದೆ. ಅದರಡಿಯಲ್ಲಿ ಮೊದಲ ಕಂತಿನ ಹಣ ರು. 125 ಲಕ್ಷವನ್ನು 14 ಜಿಲ್ಲೆಗಳ 30 ಸಂಸ್ಥೆಗಳಿಗೆ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಹಾನಗಲ್ಲಿನ ಕಂಚಗಾರ ಓಣಿಯ ನಮಾನ ಮಸಜೀದ ಮಕಬೂಲಿಯಾ ಕಮೀಟಿ, ಅಕ್ಕಿಆಲೂರಿನ ಅಂಜುಮನ್ ಇಸ್ಲಾಂ ಸುನ್ನಿ ಹನಫಿ, ಹಾವಣಗಿಯ ಜಾಮೀಯಾ ಮಸಜೀದ, ಅರಿಷಣಗುಪ್ಪಿಯ ಅಂಜುಮನ್ ಇಸ್ಲಾಂ, ಬೆಳಗಾಲಪೇಟೆಯ ಮಹಬೂಬಿಯಾ ಜಮಾತ, ಬೊಮ್ಮನಹಳ್ಳಿಯ ಜುಮ್ಮಾ ಮಸಜೀದ, ಕೊಪ್ಪರಸಿಕೊಪ್ಪದ ಅಂಜುಮನ್ ಇಸ್ಲಾಂ, ಕರಗುದರಿಯ ಜುಮ್ಮಾ ಮಸಜೀದ, ಚಿಕ್ಕಾಂಶಿ ಹೊಸೂರಿನ ಮುಸ್ಲಿಂ ಜಮಾತ ಹಾಗೂ ಹುಡಾ ಗ್ರಾಮದ ಅಂಜುಮನ್ ಇಸ್ಲಾಂ ಮಸೀದಿಗಳ ಜೀರ್ಣೋದ್ಧಾರಕ್ಕಾಗಿ ಹಣ ಬಿಡುಗಡೆಗೊಳಿಸಲಾಗಿದೆ. ಆವರಣ ಗೋಡೆ ನಿರ್ಮಾಣಕ್ಕಾಗಿ ತಲಾ ರು. ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೊಂದು ಕಂತುಗಳ ಸಹಾಯಧನ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.