ಶಿಗ್ಗಾಂವಿ, ಬಂಕಾಪುರ ಪುರಸಭೆಗೆ ನಾಮಪತ್ರ
ಶಿಗ್ಗಾಂವಿ: ಸ್ಥಳೀಯ ಪುರಸಭೆ ಆವರಣದಲ್ಲಿ ಕೊಂಚ ಗೊಂದಲಮಯ ವಾತಾವರಣ ಕಂಡುಬಂತು. ಒಟ್ಟು 23 ವಾರ್ಡುಗಳಲ್ಲಿ 191 ನಾಮಪತ್ರ ಸಲ್ಲಿಕೆಯಾಗಿವೆ. ಪಕ್ಷವಾರು ಬಿಜೆಪಿ-37, ಕಾಂಗ್ರೆಸ್-66, ಜೆಡಿಎಸ್-16, ಕೆಜೆಪಿ- 12, ಬಿಎಸ್ಸಾರ್-10, ಪಕ್ಷೇತರರು- 50 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಎಲ್.ಎಸ್. ಭಜಂತ್ರಿ ತಿಳಿಸಿದ್ದಾರೆ. ಬಂಕಾಪುರ ಪುರಸಭೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನಾ ಮುಂದೆ ತಾ ಮುಂದೆ ಎನ್ನುವಂತೆ ಆಕಾಂಕ್ಷಿಗಳು ಮುತ್ತಿಕ್ಕಿದರು. ಬಳಿಕ ಪುರಸಭೆ ಆವರಣದಲ್ಲಿ ಶಾಂತ ವಾತಾವರಣ ಇದ್ದು, ಒಟ್ಟು 23 ವಾರ್ಡುಗಳಲ್ಲಿ 114 ನಾಮಪತ್ರ ಸಲ್ಲಿಕೆಯಾಗಿವೆ. ಪಕ್ಷವಾರು ಬಿಜೆಪಿ- 38, ಕಾಂಗ್ರೆಸ್- 33, ಜೆಡಿಎಸ್- 7, ಕೆಜೆಪಿ- 6, ಬಿಎಸ್ಸಾರ್- 9 ಪಕ್ಷೇತರರು- 21 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಪ್ರವೀಣಕುಮಾರ ಮಹೇಂದ್ರಕರ ತಿಳಿಸಿದರು.
ಹಿರೇಕೆರೂರು ಪಪಂಗೆ 92
ಹಿರೇಕೆರೂರು: ಇಲ್ಲಿನ ಪಪಂನ 23 ವಾರ್ಡುಗಳಿಗೆ 92 ನಾಮಪತ್ರ ಸಲ್ಲಿಕೆಯಾಗಿವೆ. ಜೆಡಿಎಸ್ -19, ಕೆಜೆಪಿ-16, ಬಿಜೆಪಿ -16, ಕಾಂಗ್ರೆಸ್- 17, ಬಿಎಸ್ಆರ್ -13, ಪಕ್ಷೇತರರು 11, ಕಾಂಗ್ರೆಸ್ನ ಓರ್ವ ಅಭ್ಯರ್ಥಿ 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.